ನೆಲ್ಯಾಡಿಯ ಹೆಸರಾಂತ ಉದ್ಯಮಿ, ಕೊಡುಗೈ ದಾನಿ ಯು.ಪಿ.ವರ್ಗೀಸ್ (ರಬ್ಬರ್ ವರ್ಗೀಸ್) ನಿಧನ

ಶೇರ್ ಮಾಡಿ

ನೇಸರ ಜು.04: ನೆಲ್ಯಾಡಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಹಾಗೂ ಎಲೈಟ್ ಕ್ಯಾಶೂ ಇಂಡಸ್ಟ್ರೀಸ್ ಮಾಲಕ, ಹೆಸರಾಂತ ಉದ್ಯಮಿ, ಕೊಡುಗೈ ದಾನಿ, ರಬ್ಬರ್ ವರ್ಗೀಸ್ ಎಂದೇ ಖ್ಯಾತರಾದ ನೆಲ್ಯಾಡಿ ಉನ್ನುಕಲ್ಲಿಂಗಲ್ ನಿವಾಸಿ ಯು.ಪಿ.ವರ್ಗೀಸ್(79ವ.)ರವರು ಜು.4ರಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ನಾಲ್ಕೈದು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಯು.ಪಿ.ವರ್ಗೀಸ್‌ರವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ತುಸು ಚೇತರಿಸಿಕೊಂಡಿದ್ದರು. ಕೆಲ ದಿನಗಳಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಜು.3ರಂದು ರಾತ್ರಿ 11 ಗಂಟೆ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಅವರು ಜು.4ರಂದು ಸಂಜೆ 3.30ರ ವೇಳೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಅನ್ನಮ್ಮ, ಪುತ್ರರಾದ ಶಾಜಿ, ಸೈಬು, ಸೈಜು, ಪುತ್ರಿಯರಾದ ಸೆಲಿನಾ, ಶೈಬಿಯವರನ್ನು ಅಗಲಿದ್ದಾರೆ.
ನಾಳೆ ಅಂತ್ಯಕ್ರಿಯೆ:
ಯು.ಪಿ.ವರ್ಗೀಸ್‌ರವರ ಮೃತದೇಹ ಜು.4ರಂದು ರಾತ್ರಿ ನೆಲ್ಯಾಡಿಯ ಮನೆಗೆ ಬರಲಿದೆ. ಜು.5ರಂದು ಬೆಳಿಗ್ಗೆ 10 ಗಂಟೆಗೆ ಮನೆಯಲ್ಲಿ ಅಂತಿಮ ವಿಧಿ ವಿಧಾನದ ಬಳಿಕ ನೆಲ್ಯಾಡಿ ಸೈಂಟ್ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಪುತ್ರ ಶಾಜಿ ಯು.ವಿ.ತಿಳಿಸಿದ್ದಾರೆ.

Leave a Reply

error: Content is protected !!