ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್ ಅಮಾನತು ಆದೇಶಕ್ಕೆ ಕೆಎಟಿ ಮಧ್ಯಂತರ ತಡೆ-ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಲು ಜಿ.ಪಂ.ಇ ಒ ಆದೇಶ

ಶೇರ್ ಮಾಡಿ

ನೇಸರ ಜು.19: ಗ್ರಾಮ ಪಂಚಾಯಿತಿ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ, ಆರೋಪದಲ್ಲಿ ಕಡಬ ತಾಲೂಕು ಶಿರಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್‌ರವರನ್ನು ಅಮಾನತುಗೊಳಿಸಿ ದ.ಕ.ಜಿ.ಪಂ.ಇ ಒ ಡಾ.ಕುಮಾರ್‌ರವರು ಜೂ.7ರಂದು ನೀಡಿರುವ ಆದೇಶಕ್ಕೆ ತಡೆ ನೀಡಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿ ಮುಂದುವರಿಯಲು ವೆಂಕಟೇಶ್‌ರವರಿಗೆ ದ.ಕ.ಜಿಲ್ಲಾ ಪಂಚಾಯತ್ ಇಒ ಡಾ.ಕುಮಾರ್‌ರವರು ಜು.16ರಂದು ಆದೇಶ ನೀಡಿದ್ದಾರೆ.


ಅಮಾನತು ಆದೇಶದ ವಿರುದ್ಧ ಪಿಡಿಒ ವೆಂಕಟೇಶ್‌ರವರು ಕೆ.ಎ.ಟಿ. ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೆ.ಎ.ಟಿ. ಮುಂದಿನ ಆದೇಶದ ತನಕ ವೆಂಕಟೇಶ್‌ರವರ ಅಮಾನತು ಆದೇಶ ರದ್ದುಗೊಳಿಸಿ ಜು.4ರಂದು ಮಧ್ಯಂತರ ಆದೇಶ ನೀಡಿದೆ. ಕೆ.ಎ.ಟಿ.ಯ ಮಧ್ಯಂತರ ಆದೇಶದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿರಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಹಾಜರಾಗಲು ವೆಂಕಟೇಶ್‌ರವರಿಗೆ ಅನುಮತಿಸಿದ್ದು ಈ ಅನುಮತಿ ಆದೇಶವು ಕೆ.ಎ.ಟಿ.ಯ ಅಂತಿಮ ಆದೇಶಕ್ಕೆ ಹಾಗೂ ಮಧ್ಯಂತರ ಆದೇಶದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಡಾ.ಕುಮಾರ್ ಜು.16ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Leave a Reply

error: Content is protected !!