ನೆಲ್ಯಾಡಿ: ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟ

ಶೇರ್ ಮಾಡಿ

ನೇಸರ ಸೆ.10: ಪದವಿ ಪೂರ್ವಶಿಕ್ಷಣ ಇಲಾಖೆ ದ. ಕ ಮಂಗಳೂರು ಮತ್ತು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿ ಇವರ ಜಂಟಿ ಆಶ್ರಯದಲ್ಲಿ ಸೆ.10 ರಂದು ಕಡಬ ತಾ. ಮಟ್ಟದ ಬಾಲಕ ಬಾಲಕಿಯರ ಕಬ್ಬಡಿ ಪಂದ್ಯಾಟ ಸಂತ ಜಾರ್ಜ್ ವಿದ್ಯಾ ಸಂಸ್ಥೆ ಯಲ್ಲಿ ನಡೆಯಿತು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಬಡ್ಡಿ ಕ್ರೀಡಾಪಟು ರೋ.ಶಿವರಾಮೆ ಗೌಡ ಏನೆಕಲ್ ಕಬ್ಬಡಿ ಪಂದ್ಯಾಟವನ್ನು ಉದ್ಘಾಟಿಸಿ ಕ್ರೀಡೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವಂತಹದು, ಮಾನಸಿಕ ಸ್ಥಿರತೆ, ಶರೀರಿಕವಾಗಿ ವ್ಯಾಯಾಮ, ಅಕ್ರಮಣ ಶೀಲತೆಯಂತಹ ಮನೋಭಾವವನ್ನು ಜಾಗ್ರತಗೊಳಿಸುದರೊಂದಿಗೆ, ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ವಿಪುಲ ಉದ್ಯೋಗಾವಕಾಶಗಳು ಇಂದು ನಮ್ಮಲ್ಲಿವೆ. ಯೇಸುದಾಸ್, ಅಭಿಷೇಕ್ ಶೆಟ್ಟಿ ಯಂತಹ ಕ್ರೀಡಾ ಪಟುಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಕ್ರೀಡಾ ಕ್ಷೇತ್ರಕ್ಕೆ ಘನತೆ ನೀಡಿದ ನೆಲ್ಯಾಡಿಯಂತಹ ಊರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿರುವುದು ನಮಗೆ ಹೆಮ್ಮೆ ತರುವಂತಹದು ಎಂದು ಹೇಳಿದರಲ್ಲದೆ, ವಿನಯ ಶೀಲತೆ ಮೈಗೂಡಿಸಿಕೊಳ್ಳಿ, ಸೋತಾಗ ದೃತಿಗೆಡದೆ ಎದುರು ತಂಡದ ಕೌಶಲ್ಯ ವನ್ನು ಮೈಗೂಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್ ರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಲವು ಕ್ರೀಡಾಕೂಟಗಳನ್ನು ಆಯೋಜಿಸಿದ ನನಗೆ ಈ ಕ್ರೀಡಾಕೂಟ ನಡೆಸಲು ಸಿಕ್ಕಿರುವ ಅವಕಾಶ ತುಂಬಾ ಖುಷಿ ತಂದಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಏಲಿಯಾಸ್ ಎಂ ಕೆ., ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ದೈಹಿಕ ಶಿಕ್ಷಕರಾದ ಮಹಮ್ಮದ್ ಹ್ಯಾರೀಸ್ ಇಂದಿನ ಕಬ್ಬಡಿ ಕ್ರೀಡಾಕೂಟದ ನಿಯಾಮವಳಿಗಳನ್ನು ತಿಳಿಸಿ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.

Leave a Reply

error: Content is protected !!