ನೇಸರ ಸೆ.10: ಸೆ.11ರಂದು ಉಪ್ಪಿನಂಗಡಿಯಲ್ಲಿ ಎಂಡೋ ಸಂತ್ರಸ್ತರ ಸಮಾಲೋಚನ ಸಭೆ ಎಂಡೋ ಸಂತ್ರಸ್ತರಿಗೆ ಈ ಹಿಂದೆ ಭರವಸೆಗಳು ಈಡೇರದೆ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ಎಂಡೋ ಸಂತ್ರಸ್ತರ ಹಲವಾರು ಬೇಡಿಕೆಗಳು ಕಳೆದ ಎರಡು ವರ್ಷ ಗಳಿಂದ ಈಡೇರಿಲ್ಲ ಎಂಡೋ ಸಂತ್ರಸ್ತರಿಗೆ ಯುಡಿಐಡಿ ಕಾರ್ಡ್, ಪೌಷ್ಟಿಕ ಆಹಾರ ಪೂರೈಕೆ, ಪುತ್ತೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಎಂಡೋ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ, ಎಂಡೋ ಸಂತ್ರಸ್ತರ, ದಿವ್ಯಂಗಾರ ಸಮಸ್ಯೆಗಳನ್ನು ಆಲಿಸಲು ಇರಬೇಕಾದ ಕಮಿಷನ್ ರ ಹುದ್ದೆ ಖಾಲಿ ಇರುವುದು, ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ, ಪಿಂಚಣಿ ಹೆಚ್ಚಳದಂತಹ ಕೋರಿಕೆಗಳು ಈಡೇರದೆ ಇರುವುದರಿಂದ ದೊಡ್ಡ ಮಟ್ಟದ ಹೋರಾಟಕ್ಕಾಗಿ ಸಮಾಲೋಚನೆ ನಡೆಸಲು ಈ ಸಭೆ ನಡೆಯಲಿದೆ. ಉಪ್ಪಿನಂಗಡಿಯ ಸಂಗಮ ಕೃಪಾದಲ್ಲಿ ಈ ಸಭೆ ನಡೆಯಲಿದೆ.
ಎಂಡೋ ಸಂತ್ರಸ್ತರು ಮತ್ತು ಅವರ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸುವಂತೆ ಸಂಘಟಕರು ವಿನಂತಿಸಿದ್ದಾರೆ