ನೇಸರ ಸೆ.11: ಕರ್ನಾಟಕದ ಪ್ರಥಮ ರಬ್ಬರು ಬೆಳೆಗಾರರ ಸಂಘವೆಂಬ ಹೆಗ್ಗಳಿಕೆಯೊಂದಿಗೆ ಕೀರ್ತಿ ಶೇಷ ಜಿ.ಎನ್.ಭಿಡೆಯವರ ನೇತೃತ್ವದಲ್ಲಿ 1985 ರಲ್ಲಿ ಆರಂಭಗೊಂಡ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘವು,ರಬ್ಬರ್ ವ್ಯವಹಾರದಲ್ಲಿ ಏಷ್ಯಾದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. 2021-22ನೇ ಆರ್ಥಿಕ ವರ್ಷದ ವ್ಯವಹಾರದಲ್ಲಿ 76.20 ಲಕ್ಷ ರೂ. ಗಿಂತ ಅಧಿಕ ಲಾಭಗಳಿಸಿದ್ದು ಸದಸ್ಯರಿಗೆ ಶೇ.20 ಪಾಲು ಮುನಾಫೆ ನೀಡಲು ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಅವರು ಶನಿವಾರ, ಉಜಿರೆಯ ಶ್ರೀ ಕೃಷ್ಣಾನುಗ್ರಹದಲ್ಲಿ ನಡೆದ ಸಂಘದ 37ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3,603 ಸದಸ್ಯರನ್ನು ಹೊಂದಿರುವ ಸಂಘವು 1.18 ಕೋಟಿ ರೂ. ಪಾಲುಬಂಡವಾಳ, 18.78 ಕೋಟಿ ರೂ.ನಿರಖುಠೇವಣಿ ಹೊಂದಿದೆ. ಗುರುವಾಯನಕೆರೆ, ಹೆಬ್ರಿ,ಅರಸಿನಮಕ್ಕಿ, ಗಂಡಿಬಾಗಿಲು, ತೋಟತ್ತಾಡಿ, ಶಿಬಾಜೆ, ಕೊಕ್ಕಡ ಕೇಂದ್ರಗಳಲ್ಲಿ ನೇರ ಖರೀದಿ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ರಬ್ಬರಿಗೆ ಕೆಜಿ ಒಂದರ ಸರಾಸರಿ ಧಾರಣೆ ರೂ.166.74ನ್ನು ನೀಡಲಾಗಿದೆ.
ಸದಸ್ಯರಿಗೆ ಸಂಘದಲ್ಲಿ ರಬ್ಬರನ್ನು ದಾಸ್ತಾನು ಇಡುವ ಸೌಲಭ್ಯವನ್ನು ಮುಂದುವರಿಸಿದ್ದು ಶೇ.50ಕ್ಕಿಂತ ಹೆಚ್ಚು ಸದಸ್ಯರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಘದ ವ್ಯವಹಾರ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಸದಸ್ಯರ ಅನುಕೂಲಕ್ಕಾಗಿ ಸಂಘದ ವತಿಯಿಂದ ಗುರುವಾಯನಕೆರೆಯ ಖರೀದಿ ಕೇಂದ್ರದಲ್ಲಿ ಕಾಳುಮೆಣಸು ಖರೀದಿ ವ್ಯವಹಾರ ವನ್ನು ಆರಂಭಿಸಲಾಗಿದೆ. ಸಂಘದ ನರ್ಸರಿಯಿಂದ ಉತ್ತಮ ಗುಣಮಟ್ಟದ ರಬ್ಬರ್ ಗಿಡಗಳನ್ನು ಸದಸ್ಯರಿಗೆ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ರಸಗೊಬ್ಬರ ಸೇರಿದಂತೆ ರಬ್ಬರ್ ಬೆಳೆಗಾರರಿಗೆ ಅಗತ್ಯವಿರುವ ಗುಣಮಟ್ಟದ ಸಾಮಗ್ರಿಗಳ ಮಾರಾಟವನ್ನು ಮಾಡುತ್ತಿದೆ. ಸಂಘದ ಸಂಸ್ಕರಣ ಘಟಕದಲ್ಲಿ ವಾಹನ, ನೀರಾವರಿ ಪಂಪುಸೆಟ್ಟುಗಳಿಗೆ ಅಗತ್ಯವಿರುವ ರಬ್ಬರ್ ನಿಂದ ತಯಾರಾಗುವ ಬಿಡಿ ಭಾಗಗಳು, ಮ್ಯಾಟ್ ಇತ್ಯಾದಿಗಳನ್ನು ತಯಾರಿಸಿ ಮಾರುಕಟ್ಟೆಗಳಿಗೆ ಒದಗಿಸಲಾಗುತ್ತಿದೆ. ರಬ್ಬರ್ ಗಿಡಗಳಿಗೆ ಔಷಧಿ ಸಿಂಪಡಿಸಲು ಬೇಕಾಗುವ ಸ್ಪ್ರೇಯರನ್ನು ಸಂಘದ ವತಿಯಿಂದ ಬಾಡಿಗೆಗೆ ಕೊಡುವ ವ್ಯವಸ್ಥೆಯು ಇದೆ.
ಮುಂದಿನ ಯೋಜನೆಗಳು:
ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರಿಕರಣ ಗೊಳಿಸಿ ಆನ್ ಲೈನ್ ಮಾಡುವುದು. ಈಗಾಗಲೇ ಐದು ಖರೀದಿ ಕೇಂದ್ರಗಳನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದೆ. ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನ ಒಳಗೆ ಹಾಗೂ ಹೊರಭಾಗಗಳಲ್ಲಿ ಸೇವಾಕೇಂದ್ರಗಳನ್ನು ತೆರೆಯುವುದು. ಸುಧಾರಿತ ಕೃಷಿ ಕ್ರಮವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ತಜ್ಞರಿಂದ ತೋಟಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸುವುದು. ಬೆಳೆಗಾರರಿಗೆ ಅನುಕೂಲ ನೀಡಲು ಸುಸಜ್ಜಿತ ಗೋದಾಮು ನಿರ್ಮಿಸುವುದು. ಖರೀದಿ ಕೇಂದ್ರಗಳಿಗೆ ಸ್ವಂತ ನಿವೇಶನ ಖರೀದಿಸಿ,ಕಟ್ಟಡಗಳ ರಚನೆ