ಸಿಯೋನ್ ಆಶ್ರಮ: ಓಣಂ ಮೊಂತಿ ಹಬ್ಬ ಆಚರಣೆ

ಶೇರ್ ಮಾಡಿ

ನೇಸರ ಸೆ.11: ನೆರಿಯ ಗ್ರಾಮದ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮದಲ್ಲಿ ಓಣಂ ಹಾಗೂ ಮೊಂತಿ ಹಬ್ಬವನ್ನು ಆಚರಿಸಲಾಯಿತು.
ಗಂಡಿ ಬಾಗಿಲು ಚರ್ಜ್ ನ ಧರ್ಮಗುರು ಫಾ. ಶಾಜಿ ವೆಟ್ಟಂತಡತ್ತಿಲ್ ಆಶೀರ್ವದಿಸಿದರು. ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ.ಪೌಲೋಸ್ ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ನಿರತರು, ನೆರಿಯ ಗ್ರಾಮ ಪಂಚಾಯಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಸೇರಿದಂತೆ ಸಂಘ-ಸಂಸ್ಥೆಯ ಸದಸ್ಯರು,ಆಶ್ರಮದ ಎಲ್ಲಾ ಟ್ರಸ್ಟಿ ಸದಸ್ಯರು ಕುಟುಂಬಸ್ಥರು ಸಿಬ್ಬಂದಿ ಆಶ್ರಮವಾಸಿಗಳು ಉಪಸ್ಥಿತರಿದ್ದರು.
ಸಾಂತ್ವನಂ ಕುವೈಟ್ ಹಾಗೂ ಕೆಸಿಎಂಎ ಕುವೈಟ್ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.

Leave a Reply

error: Content is protected !!