ನೆಲ್ಯಾಡಿ: ರಾಷ್ಟ್ರಮಟ್ಟದ ಖೋ ಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀ ರಾಮ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಅಭಿನಂದನಾ ಮೆರವಣಿಗೆ

ಶೇರ್ ಮಾಡಿ

ನೆಲ್ಯಾಡಿ: ರಾಜಸ್ಥಾನದ ಅಲವಾರ ಜಿಲ್ಲೆಯಲ್ಲಿ ವಿದ್ಯಾಭಾರತಿ ಖೇಲ್ ಪರಿಷತ್ ಇದರ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಹದಿನಾಲ್ಕು ವಯೋಮಾನದ ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ (ಮೂರು ರಾಜ್ಯ ಕರ್ನಾಟಕ-ತೆಲಂಗಾಣ- ಅಂಧ್ರ ಪ್ರದೇಶ) ತಂಡವನ್ನು ಪ್ರತಿನಿಧಿಸಿದ ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ ತಂಡ ಪಂದ್ಯಕೂಟದಲ್ಲಿ ಸತತ ಗೆಲುವಿನ ಮೂಲಕ ಫೈನಲ್ ಹಂತಕ್ಕೆ ಬಂದು ದ್ವೀತಿಯ ಸ್ಥಾನವನ್ನು ಅಲಂಕರಿಸಿದೆ.
ಇಂದು ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಸಾರ್ವಜನಿಕ ಅಭಿನಂದನಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ನೆಲ್ಯಾಡಿಯ ಉದ್ಯಮಿ ದುರ್ಗಾಶ್ರೀಯ ಮಾಲಕರಾದ ಸತೀಶ್ ಭಟ್ ರವರು ಪಂದ್ಯಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಸಾರ್ವಜನಿಕವಾಗಿ ಶಾಲು ಹೊದಿಸಿ ಗೌರವಿಸಿದರು.
ಮೆರವಣಿಗೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು, ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದರು.

Leave a Reply

error: Content is protected !!