ನೆಲ್ಯಾಡಿ: ಲಾರಿ ಪಲ್ಟಿ ; ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಲಾರಿಯೊಂದು ಮಗುಚಿ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಬೆಂಗಳೂರಿನಿಂದ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯು ಹೊಸಮಜಲು ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರಿಗೆ ಅಡಚಣೆಯಾಗಿದೆ.

ಪರ್ಯಾಯ ಮಾರ್ಗ ಬಳಕೆ :
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಿದ್ದ ಪರಿಣಾಮ ಮಂಗಳೂರು ಬೆಂಗಳೂರು ಸಂಚರಿಸುವ ಪ್ರಯಾಣಿಕರು ನೆಲ್ಯಾಡಿ- ಪುತ್ಯೆ- ಕೊಕ್ಕಡ ಮಾರ್ಗವಾಗಿ ಪೆರಿಯಶಾಂತಿಯ ಮೂಲಕ ಪ್ರಯಾಣಿಸುತ್ತಿದ್ದಾರೆ.
ಅಪಘಾತದಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಹೆಡ್‍ಕಾನ್‍ಸ್ಟೇಬಲ್ ಬಾಲಕೃಷ್ಣ ಹಾಗೂ ಕುಶಾಲಪ್ಪ,ಪ್ರತಾಪ್ ನೆಲ್ಯಾಡಿ ಹಾಗೂ ಗುಂಡ್ಯದ ಪರಶುರಾಮ ಕ್ರೇನ್ ತಂಡದ ಸದಸ್ಯರು ಆಗಮಿಸಿ ಲಾರಿಯನ್ನು ಮೇಲೆತ್ತಿ ಸಂಚಾರ ಸುಗಮಗೊಳಿಸುವ ಯತ್ನದಲ್ಲಿದ್ದಾರೆ.
ಪ್ರಯಾಣಿಕರು ಗೋಳಿತೊಟ್ಟು ಕೊಕ್ಕಡ ಮಾರ್ಗ ಅಥವಾ ಕೊಕ್ಕಡ ಪುತ್ಯೆ ಮಾರ್ಗ ಬಳಸಿ ಪ್ರಯಾಣಿಸುವುದು ಸೂಕ್ತ.

Leave a Reply

error: Content is protected !!