ಮುಗೇರಡ್ಕ: ಅರಣ್ಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ : 15 ಲಕ್ಷ ಮೌಲ್ಯದ ಸೊತ್ತು ವಶ

ಶೇರ್ ಮಾಡಿ

ಮುಗೇರಡ್ಕ: ಉಪ್ಪಿನಂಗಡಿ ವಲಯ ಬಂದಾರು ಶಾಖೆಯ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಅಕ್ರಮವಾಗಿ ಮರದ ದಿಮ್ಮಿಯನ್ನು ಸಾಗಿಸುತ್ತಿದ್ದ ಲಾರಿ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಚಾಮಡ್ಕ ಪಿಲಿಕುಡೆಲ್ ಮನೆ ಕೃಷ್ಣಪ್ಪ ಎಂಬವರ ಸ್ಥಳದಿಂದ ಹೆಬ್ಬಲಸು ಮತ್ತು ಮಾವಿನ ಜಾತಿಯ ಮರವನ್ನು ಕಡಿದು 26 ದಿಮ್ಮಿಗಳನ್ನಾಗಿ ಮಾಡಿ ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಉಪ್ಪಿನಂಗಡಿಯ ವಲಯಾರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ಲಾರಿ, ಬೈಕ್ ಹಾಗೂ ಆರೋಪಿಗಳಾದ ಅಬ್ಬಾಸ್, ಇರ್ಫಾನ್ ನನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಅಶ್ರಫ್ ತಪ್ಪಿಸಿಕೊಂಡಿದ್ದು.

ಒಟ್ಟು 15 ಲಕ್ಷ ಮೌಲ್ಯದ ಸೋತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಲಯಾರಣ್ಯಾಧಿಕಾರಿ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜೆರಾಲ್ಡ್ ಡಿಸೋಜಾ ಉಪವಲಯ ಅರಣ್ಯಾಧಿಕಾರಿ ಬಂದಾರು ಶಾಖೆ, ಗಸ್ತು ಅರಣ್ಯ ಪಾಲಕರಾದ ಜಗದೀಶ್ ಕೆ.ಎನ್, ಪ್ರಶಾಂತ್ ಮಾಳಗಿ, ಜಗದೀಶ್ ಎಂ ಎಂ
, ಅರಣ್ಯ ವೀಕ್ಷಕರಾದ ರವಿ ಬಿ, ಸೇಸಪ್ಪ, ಚಾಲಕ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.

Leave a Reply

error: Content is protected !!