ಪುತ್ತೂರು ಬ್ಯಾನರ್ ಪ್ರಕರಣ: ‘ಒಳಗಿನ ಸತ್ಯ ನಮಗೆ ಗೊತ್ತಿದೆ’ ಎಂದ ಶಾಸಕ ಯತ್ನಾಳ್ ಹೇಳಲು ಕಾರಣವೇನು?

ಶೇರ್ ಮಾಡಿ

ಪುತ್ತೂರು: ಒಳಗಿನ ಸತ್ಯ ನಮಗೆ ಗೊತ್ತಿದೆ. ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ ಎಂದು ವಿಜಯಪುರ ನಗರ ಶಾಸಕ, ಬಿಜೆಪಿಯ ಪೈರ್‌ ಬ್ರಾಂಡ್‌ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ಬ್ಯಾನರ್‌ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಮಾಧ್ಯಮದೊಂದಿಗೆ ಘಟನೆಯನ್ನು ಖಂಡಿಸಿ ಮಾತನಾಡಿದ ಯತ್ನಾಳ್, “ಇದರ ಹಿಂದೆ ಏನಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಈ ಘಟನೆ ಪೊಲೀಸ್ ಇಲಾಖೆಗೆ ಗೌರವ ತರುವಂತದ್ದಲ್ಲ. ತಕ್ಷಣ ಡಿವೈಎಸ್‌ ಪಿ ಯನ್ನು ಅಮಾನತು ಮಾಡಬೇಕು ಎಂದು ಹೇಳಿದರು.
“ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಮರಣಹೋಮ ಆಗಿದೆ. ನಮ್ಮ ಕಡೆಯಿಂದ ತಪ್ಪಾಗದಂತೆ ನೋಡಿಕೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರ ಇದೆಯೆಂದು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲ ಎಂದು ಹೇಳಿದರು.
ಕೇಂದ್ರದ ನಾಯಕರಿಗೆ ಘಟನೆ ಬಗ್ಗೆ ಕಾರ್ಯಕರ್ತರ ಭಾವನೆ ಬಗ್ಗೆ ತಿಳಿಸುತ್ತೇನೆ. ನಿಮ್ಮ ಭಾವನೆಗೆ ತಕ್ಕ ನಿರ್ಧಾರವನ್ನು ಕೇಂದ್ರ ತೆಗೆದುಕೊಳ್ಳಲಿದೆ ಎಂದು ಹೇಳಿದರಲ್ಲದೆ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಯನ್ನು ವೈದ್ಯಕೀಯ ವೆಚ್ಚಕ್ಕಾಗಿ ನೀಡಿದರು. ಯಾರು ನೋವು ಪಡುವ ಅಗತ್ಯವಿಲ್ಲ, ಎಲ್ಲವನ್ನು ಸರಿಪಡಿಸುವ ಕೆಲಸ ಹೈಕಮಾಂಡ್ ಮಾಡಲಿದೆ ಎಂದು ಅವರು ಹೇಳಿದರು.

See also  ಕಾಂಚನ: ಪರಿಸರ ಸಂರಕ್ಷಣೆ ನಮ್ಮ ಜೀವನದ ಬಹುಮುಖ್ಯ ಕರ್ತವ್ಯ - ಡಾ.ಈಶ್ವರ್ ಪ್ರಸಾದ್

Leave a Reply

Your email address will not be published. Required fields are marked *

error: Content is protected !!