ಸರ್ಕಾರಿ ನೌಕರರಿಗೆ ಕಂಪ್ಯೂಟರ್‌ ಪರೀಕ್ಷೆ ತೇರ್ಗಡೆ ಕಡ್ಡಾಯ

ಶೇರ್ ಮಾಡಿ

ಸರ್ಕಾರಿ ನೌಕರರೇ ಗಮನಿಸಿ! ವರ್ಷಾಂತ್ಯದಲ್ಲಿ ಕಂಪ್ಯೂಟರ್‌ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಲೇ ಬೇಕು. ಇಲ್ಲದೇ ಇದ್ದರೆ, ಪದೋನ್ನತಿ, ವೇತನ ಬಡ್ತಿ ಇಲ್ಲ. ಹೀಗೆಂದು ರಾಜ್ಯ ಇ-ಆಡಳಿತ ಕಚೇರಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ತ್ವರಿತಗತಿಯಲ್ಲಿ ಸಾರ್ವಜನಿಕ ಸೇವೆಗೆ ಸರ್ಕಾರಿ ನೌಕರರು, ಅಧಿಕಾರಿಗಳು ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಇ-ಆಡಳಿತಕ್ಕೆ ಒತ್ತು ಕೊಡುತ್ತಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ಸೇವೆ ಸೇರಿ ಕಂಪ್ಯೂಟರ್‌ ಕಲಿಯದ ಸುಮಾರು 2ಲಕ್ಷಕ್ಕೂ ಅಧಿಕ ಸರ್ಕಾರಿ ಅಧಿಕಾರಿಗಳಿಗೆ, ನೌಕರರು, ವಿವಿಧ ನಿಗಮ ಮಂಡಳಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೂಚನೆಯನ್ನು ಪಾಲಿಸಲೇಬೇಕಾಗಿದೆ.

ಈಗಾಗಲೇ ಹಲವು ಬಾರಿ ಕಂಪ್ಯೂಟರ್‌ ಪರೀಕ್ಷೆ ಉತ್ತೀರ್ಣರಾಗಲು ಅವಕಾಶ ನೀಡಲಾಗಿತ್ತು. ಪರೀಕ್ಷೆ ಉತ್ತೀರ್ಣರಾಗದವರಿಗೆ ಈ ವರ್ಷದ ಕೊನೆಯವರೆಗೆ ಅಂತಿಮ ಅವಕಾಶ ಕೊಡಲಾಗಿದೆ.

ನೊಂದಣಿಗೆ ಸಂಪರ್ಕಿಸಿ:
ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದಿರುವ ಅಧಿಕಾರಿ, ನೌಕರರುಗಳು https://clt.karnataka.gov.in ಹಾಗೂ ನಿಗಮ ಮಂಡಳಿಗಳ ನೌಕರರು https://mnkclt.clt.karnataka.gov.in ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಕೋರಲಾಗಿದೆ. ಅಲ್ಲದೇ ಆಯಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಮಾಹಿತಿ ನೀಡುವಂತೆ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ.

ಉತ್ತೀರ್ಣ ಆಗದಿದ್ದರೆ ಬಡ್ತಿ ಮುಂಬಡ್ತಿ, ವೇತನ ಬಡ್ತಿ ಇಲ್ಲ!
2023ರ ಡಿಸೆಂಬರ್‌ 31 ರೊಳಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ, ಹಾಗೂ ವಾರ್ಷಿಕ ವೇತನ ಬಡ್ತಿ ಮತ್ತಿತರ ಭತ್ಯಗಳನ್ನು ಪಡೆಯಲು ಅರ್ನಹರಾಗಿರುತ್ತಾರೆ. ಆದ್ದರಿಂದ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇರುವ ಸರ್ಕಾರಿ ನೌಕರರು ಕೂಡಲೇ ಪರೀಕ್ಷೆ ತೆರೆದುಕೊಂಡು ಉತ್ತೀರ್ಣರಾಗಬೇಕೆಂದು ರಾಜ್ಯ ಸರ್ಕಾರದ ಇ-ಆಡಳಿತ ಕೇಂದ್ರದ ಸಾಮರ್ಥ್ಯ ಸಂಘಟನೆಯ ಯೋಜನಾ ನಿರ್ದೇಶಕರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!