‘ನಮ್ಮ ಗಿಡ ನಮ್ಮ ಹೆಮ್ಮೆ’- ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಶೇರ್ ಮಾಡಿ

ಶಿರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಕಡಬ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲಾಪರು ಮತ್ತು ಅರಣ್ಯ ಇಲಾಖೆ ಶಿರಾಡಿ ಶಾಖೆ ಆಶ್ರಯದಲ್ಲಿ, ಕಲಾಪರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಜು.02ರಂದು ನಡೆಯಿತು.

ಕಾರ್ಯಕ್ರಮವನ್ನು ಶಿರಾಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಧೀರಜ್.ಎಸ್ ಉದ್ಘಾಟಿಸಿ ಇಲಾಖೆಯ ವತಿಯಿಂದ ಜುಲೈನಲ್ಲಿ ಸಸಿ ನೆಡುವ ಕಾರ್ಯಕ್ರಮ ‘ನಮ್ಮ ಗಿಡ ನಮ್ಮ ಹೆಮ್ಮೆ’ ಎಂಬ ಧ್ಯೇಯದೊಂದಿಗೆ ರಾಜ್ಯಾಧ್ಯಂತ ಆಚರಿಸುತ್ತಿದ್ದು, ಧರ್ಮಾಧಿಕಾರಿಗಳು ಪರಿಸರ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.

ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ನೆಲ್ಯಾಡಿ ವಲಯದ ಅಧ್ಯಕ್ಷರಾದ ಕುಶಾಲಪ್ಪರವರು ವಹಿಸಿ ಶುಭ ಹಾರೈಸಿದರು. ಸಭೆಯಲ್ಲಿ ಜನಜಾಗೃತಿ ನೆಲ್ಯಾಡಿ ವಲಯದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಲು ಮಾತಾಡಿ ಪರಿಸರ ಉಳಿಸುವ ಹೊಣೆ ನಮ್ಮೆಲ್ಲರ ಜವಾಬ್ದಾರಿ ಎಂದೂ ತಿಳಿಸಿದರು.
ಸಭೆಯಲ್ಲಿ ಗಸ್ತು ಅರಣ್ಯ ಪಾಲಕ ಸುನಿಲ್ ನಾಯ್ಕ್, ಜನಜಾಗೃತಿ ಸದಸ್ಯರಾದ ತುಕಾರಾಮ್, ಕೃಷಿ ಮೇಲ್ವಿಚಾರಕರಾದ ಸೋಮೇಶ್, ದೇವಸ್ಥಾನದ ಅರ್ಚಕರಾದ ಪ್ರಶಾಂತ್, ಕಲಾಪರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಇತರರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ವಿಜೇಶ್ ಪ್ರಸ್ತಾವಿಸಿದರು, ಪದಾಧಿಕಾರಿ ಅಣ್ಣು ರವರು ಸ್ವಾಗತಿಸಿ, ಸೇವಾಪ್ರತಿನಿಧಿಯಾದ ವಿದ್ಯಾಲಕ್ಷ್ಮಿ  ನಿರೂಪಿಸಿದರು.

Leave a Reply

error: Content is protected !!