ಚಾರ್ಮಾಡಿ: ನಿಯಂತ್ರಣ ಕಳೆದುಕೊಂಡ ಮೂರು ವಾಹನಗಳು ಪಲ್ಟಿ

ಶೇರ್ ಮಾಡಿ

ಬೆಳ್ತಂಗಡಿ: ಚಾರ್ಮಾಡಿ ಪೇಟೆ ಹಾಗೂ ಚಾರ್ಮಾಡಿ ಘಾಟಿ ಪರಿಸರದಲ್ಲಿ ಒಟ್ಟು ಮೂರು ವಾಹನಗಳು ಮಗುಚಿ ಬಿದ್ದ ಘಟನೆ ರವಿವಾರ ಸಂಜೆ ನಡೆದಿದೆ.

ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣಿಸುತ್ತಿದ್ದ ಟಿ ಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿ ಪೇಟೆಯ 100 ಮೀ. ಅಂತರದಲ್ಲಿ ಉರುಳಿ ಬಿದ್ದಿವೆ. ಇಲ್ಲಿನ ಸುಮಾರು 3 ಕಿಮೀ ವ್ಯಾಪ್ತಿಯ ರಸ್ತೆ ಮಳೆಗಾಲದಲ್ಲಿ ವಿಪರೀತ ಜಾರುವುದರಿಂದ ಹಲವಾರು ಅಪಘಾತಗಳು ಈಗಾಗಲೇ ನಡೆದಿವೆ. ಮಳೆ ಬಂದರೆ ಇಲ್ಲಿ ವಾಹನಗಳು ಉರುಳಿ ಬೀಳುವುದು ಸಾಮಾನ್ಯವಾಗಿದೆ.

ರವಿವಾರ ಸಂಜೆಯೂ ಉತ್ತಮ ಮಳೆ ಇದ್ದು ರಸ್ತೆ ಜಾರುತ್ತಿದ್ದ ಕಾರಣದಿಂದ ಚಾಲಕರ ನಿಯಂತ್ರಣಕ್ಕೆ ಸಿಗದ ಈ ಎರಡು ವಾಹನಗಳು ಉರುಳಿ ಬಿದ್ದವು. ವಾಹನಗಳಲ್ಲಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಂದ ಸ್ಥಳೀಯರಿಗೂ ರಸ್ತೆ ಜಾರುವುದರಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಯಿತು.

ಘಾಟಿಯಲ್ಲಿ ಕಾರು ಪಲ್ಟಿ
ಚಾರ್ಮಾಡಿ ಘಾಟಿಯ ಒಂಬತ್ತನೇ ತಿರುವಿನ ಬಳಿಕ ರಸ್ತೆಯಲ್ಲಿ ಬೆಂಗಳೂರು ಮೂಲದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆಯು ನಡೆದಿದೆ. ಮೂರು ಅಪಘಾತಗಳಲ್ಲಿ ವಾಹನಗಳಿಗೆ ಹಾನಿಯಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ತಿಳಿಸಿದ್ದಾರೆ.

Leave a Reply

error: Content is protected !!