ರಾಜ್ಯದ ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್: 13,000 ಹುದ್ದೆ ಶೀಘ್ರದಲ್ಲಿ ಭರ್ತಿ ಎಂದ ಸಿಎಂ ಸಿದ್ದರಾಮಯ್ಯ

ಶೇರ್ ಮಾಡಿ

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಿದ್ದು, ಈ ಯೋಜನೆಗೆ ಇನ್ನಷ್ಟು ಶಕ್ತಿ ತುಂಬಲು 13 ಸಾವಿರ ಚಾಲಕ ಕಮ್‌ ಕಂಡಕ್ಟರ್, ಮೆಕ್ಯಾನಿಕ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಿಹಿ ಸುದ್ದಿ ನೀಡುವ ಮೂಲಕ ರಾಜ್ಯದಲ್ಲಿ ಸರ್ಕಾರಿ ಸಾರಿಗೆಯಲ್ಲಿ ಕೆಲಸ ಗಿಟ್ಟಿಸಬೇಕು ಎಂದುಕೊಂಡ ಸಾವಿರಾರು ಯುವ ನಿರುದ್ಯೋಗಿಗಳ ಮನದಲ್ಲಿ ಹುದ್ದೆಯ ಆಸೆ ಹೆಚ್ಚಿದೆ. ಆದರೆ ಸರ್ಕಾರ ಎಷ್ಟು ಬೇಗ ಅಧಿಸೂಚನೆ ಹೊರಡಿಸುತ್ತದೆ ಎಂದು ಕಾದುನೋಡಬೇಕಿದೆ.

ಕೇವಲ ಶೀಘ್ರದಲ್ಲಿ ಎಂಬ ಮಾತನ್ನು ಅಷ್ಟೆ ಹೇಳಿದ್ದು, ಯಾವಾಗ ಅಧಿಸೂಚನೆ, ಯಾವ ಹುದ್ದೆ ಎಷ್ಟು ಇರುತ್ತವೆ, ಎಷ್ಟು ತಿಂಗಳಲ್ಲಿ / ವರ್ಷದಲ್ಲಿ ಈ ನೇಮಕಾತಿ ಪ್ರಕ್ರಿಯೆಗಳನ್ನು ಮುಗಿಸಲಾಗುತ್ತದೆ ಎಂದು ತಿಳಿಸಲಾಗಿಲ್ಲ.

ಇತ್ತೀಚೆಗೆ ಸಾರಿಗೆ ಸಚಿವರು ಮಾಹಿತಿ ನೀಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಬರೋಬರಿ 13 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ನೇಮಕಕ್ಕೆ ಸಿದ್ಧತೆ ನಡೆದಿದೆ. ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದರು. ರಸ್ತೆ ಸಾರಿಗೆ ನಿಗಮಗಳಲ್ಲಿ ಭರ್ತಿ ಮಾಡಲು ಉದ್ದೇಶಿಸಿರುವ ಒಟ್ಟು ಹುದ್ದೆಗಳ ಸಂಖ್ಯೆ 13,415 ಎಂದು ತಿಳಿಸಿದ್ದರು.

ಸರ್ಕಾರ ಸದ್ಯ ಇರುವ ಸಾರಿಗೆ ಇಲಾಖೆ ಸಿಬ್ಬಂದಿ ಕೊರತೆ ನೀಗಿಸಲು ಶೀಘ್ರವೇ ಕ್ರಮ ಕೈಗೊಳ್ಳಲು ಉತ್ಸುಕವಾಗಿದ್ದು, ಸರ್ಕಾರಿ ಸಾರಿಗೆ ನಿಗಮಗಳಲ್ಲಿ ಚಾಲಕ, ಕಂಡಕ್ಟರ್, ಮೆಕ್ಯಾನಿಕ್ ಹುದ್ದೆಗಳನ್ನು ಪಡೆಯಲು ಬಯಸಿದ್ದಲ್ಲಿ ಈಗಿನಿಂದಲೇ ಸಕಲ ಸಿದ್ಧತೆ (ದಾಖಲೆಗಳು / ಪ್ರಮಾಣ ಪತ್ರಗಳು / ದೈಹಿಕ ಧೃಡತೆ / ಚಾಲನ ಪರವಾನಗಿ ) ಮಾಡಿಕೊಳ್ಳಿ. ಅಲ್ಲದೇ ಈ ಕೆಳಗಿನಂತೆ ಯಾವ ಹುದ್ದೆಗೆ ಏನು ವಿದ್ಯಾರ್ಹತೆ ತಿಳಿದುಕೊಳ್ಳಿ.

ಯಾವ ಹುದ್ದೆಗೆ ಏನು ವಿದ್ಯಾರ್ಹತೆ ?
ಚಾಲಕರು : ಎಸ್‌ಎಸ್‌ಎಲ್‌ಸಿ ಜತೆಗೆ ಚಾಲನ ಪರವಾನಗಿ ಹೊಂದಿರಬೇಕು.

ಚಾಲಕ ಕಂ ನಿರ್ವಾಹಕರು : ಪಿಯುಸಿ ಪಾಸ್‌ ಜತೆಗೆ, ಚಾಲನ ಪರವಾನಗಿ ಹೊಂದಿರಬೇಕು.
ತಾಂತ್ರಿಕ ಸಿಬ್ಬಂದಿ : ಐಟಿಐ, ಡಿಪ್ಲೊಮ.

Leave a Reply

error: Content is protected !!