ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಧ್ಯಾಪಕರ ಹಾಗೂ ಹೆತ್ತವರ ಜವಾಬ್ದಾರಿ ಸಮಾನವಾಗಿರುತ್ತದೆ- ರೆ.ಫಾದರ್ ನೋಮಿಸ್ ಕುರಿಯಾಕೊಸ್

ಶೇರ್ ಮಾಡಿ

ನೆಲ್ಯಾಡಿ: ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಗಳ ಸಂಚಾಲಕರಾದ ರೇ.ಫಾ.ನೋಮಿಸ್ ಕುರಿಯಾಕೋಸ್ ವಹಿಸಿ. ಪಾಲಕರಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಅಧ್ಯಾಪಕರ ಜೊತೆಗೆ ಕೈಜೋಡಿಸಲು ಕರೆ ಕೊಟ್ಟರು. ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯಲ್ಲಿ ಅಧ್ಯಾಪಕರ ಮತ್ತು ಹೆತ್ತವರ ಪಾತ್ರ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಏಲಿಯಾಸ್ ಅವರು ಮಾತನಾಡಿ ಆಧುನಿಕತೆಯ ದುರ್ಬಳಕೆ ಆಗದಂತೆ ಶಿಕ್ಷಣವನ್ನು ಶಿಸ್ತಿನಿಂದ ಮುನ್ನಡಿಸಲು ಕರೆ ಕೊಟ್ಟರು.
ಇತಿಹಾಸ ಉಪನ್ಯಾಸಕರಾದ ವಿಶ್ವನಾಥ್ ಶೆಟ್ಟಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಾಲಕರ ಪ್ರತಿನಿಧಿಯಾದ ಅಜೀಜ್ ಮಾತನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿ ನಿರ್ವಹಿಸಬೇಕಾದ ಹಾಗೂ ಅನುಸರಿಸಬೇಕಾದ ಹಲವು ಮಾಹಿತಿಗಳನ್ನು ನೀಡಿದರು.

ಸಮಾಜಶಾಸ್ತ್ರ ಉಪನ್ಯಾಸಕರಾದ ಮಧು ಎ.ಜೆ ಸ್ವಾಗತಿಸಿ, ವ್ಯವಹಾರ ಅಧ್ಯಯನ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಪಿ.ಬಿ ವಂದಿಸಿದರು. ಕನ್ನಡ ಉಪನ್ಯಾಸಕರಾದ ಚೇತನ್ ಗೌಡ ನಿರೂಪಿಸಿದರು.

Leave a Reply

error: Content is protected !!