ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕ ಹೃದಯ ಸ್ಥಂಭನದಿಂದ ಸಾವು

ಶೇರ್ ಮಾಡಿ

ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ 20 ವರ್ಷದ ಯುವಕನೋರ್ವ ಹೃದಯ ಸ್ಥಂಭನದಿಂದ ಅಸುನೀಗಿದ ಘಟನೆ ರವಿವಾರ ನಡೆದಿದೆ.
ಮೃತ ಯುವಕನನ್ನು ಕಲ್ಲಕುರುಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಉಥಿರಮ್ 2023 ರಕ್ತದಾನ ಮ್ಯಾರಥಾನ್ ನಲ್ಲಿ ಅವರು ಭಾಗವಹಿಸಿದ್ದರು. ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಮತ್ತು ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ ಪಿ ಮೂರ್ತಿ ಅವರು ಮ್ಯಾರಥಾನ್‌ ಗೆ ಚಾಲನೆ ನೀಡಿದ್ದರು.
ಬೆಳಿಗ್ಗೆ ಮ್ಯಾರಥಾನ್ ನ್ನು ಪೂರ್ಣಗೊಳಿಸಿದ ದಿನೇಶ್ ಕುಮಾರ್ ಅವರು ಗಂಟೆಗಳ ಕಾಲ ಆರೋಗ್ಯವಂತರಾಗಿಯೇ ಇದ್ದರು. ಆದರೆ ಬಳಿಕ ಬಳಲಿಕೆ ಕಾಡತೊಡಗಿದ ಕಾರಣ ರೆಸ್ಟ್ ರೂಂ ಗೆ ತೆರಳಿದರು ಎಂದು ಅವರ ಗೆಳೆಯರು ಹೇಳಿದ್ದಾರೆ. ಬಳಿಕ ಅವರು ನೋಡಿದಾಗ ದಿನೇಶ್ ಕುಮಾರ್ ಉಪಸ್ಮಾರದಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಸಮೀಪದ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಆಸ್ಪತ್ರೆಯ ಅಧಿಕಾರಿಗಳು ಅವರನ್ನು ಬೆಳಿಗ್ಗೆ 8:45 ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದರು, ಅಲ್ಲಿ ಅವರಿಗೆ ಕೃತಕ ಉಸಿರಾಟ ಚಿಕಿತ್ಸೆ ನೀಡಲಾಯಿತು.
ಆಸ್ಪತ್ರೆಗೆ ಕರೆತಂದ ಕೆಲವೇ ಗಂಟೆಗಳ ನಂತರ ಬೆಳಗ್ಗೆ 10:10ರ ಸುಮಾರಿಗೆ ಹೃದಯ ಸ್ತಂಭನಕ್ಕೆ ಒಳಗಾದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ಅಧಿಕಾರಿಗಳು ಅವರನ್ನು ಬದುಕಿಸಲು ಪ್ರಯತ್ನಿಸಿದರೂ, ಅವರು ಬೆಳಿಗ್ಗೆ 10:45 ಕ್ಕೆ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸ್ ದೂರು ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!