ಗೃಹಲಕ್ಷ್ಮೀ ಬೇಕೇ? ಎಪಿಎಲ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸಿ

ಶೇರ್ ಮಾಡಿ

ರಾಜ್ಯದ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿದಾರರೊಂದಿಗೆ ಎಪಿಎಲ್‌ ಕಾರ್ಡ್‌ದಾರರಿಗೂ ಸರ್ಕಾರ ಭಾಗ್ಯ ಕಲ್ಪಿಸಿದೆ. ಬಹುತೇಕ ಎಪಿಎಲ್‌ ಕಾರ್ಡ್‌ಗಳೇ ಅಮಾನತು ಅಥವಾ ರದ್ದುಗೊಂಡಿರುವುದರಿಂದ ಆತಂಕದಲ್ಲಿದ್ದಾರೆ. ಆದರೆ, ಆ ವರ್ಗದ ಆತಂಕವನ್ನೂ ದೂರಮಾಡುವ ನಿಟ್ಟಿನಲ್ಲಿ ಸರ್ಕಾರ ಎಪಿಎಲ್‌ ಕಾರ್ಡ್‌ಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲೇ ಅಪ್‌ಡೇಟ್‌ ಮಾಡಲು ಅವಕಾಶ ನೀಡಿದೆ.
2020-21ರಲ್ಲಿ ಒಂದು ದೇಶ- ಒಂದು ಪಡಿತರ ಚೀಟಿ ಅಡಿ ಪಡಿತರ ಚೀಟಿಗಳನ್ನು ಅಪ್‌ಡೇಟ್‌ ಮಾಡಿ, ಹೊಸದಾಗಿ ಕಾರ್ಡ್‌ ಸಂಖ್ಯೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ನಿಯಮಿತವಾಗಿ ಪಡಿತರ ತೆಗೆದುಕೊಳ್ಳುವ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ದಾರರು ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಿನ ಗುರುತು ನೀಡಿ, ಆಧಾರ್‌ ಸಂಖ್ಯೆ ಜೋಡಣೆ ಮಾಡಿಸಿದ್ದಾರೆ. ಎಪಿಎಲ್‌ನವರು ನ್ಯಾಯಬೆಲೆ ಅಂಗಡಿಗಳ ಹತ್ತಿರ ಸುಳಿಯಲೇ ಇಲ್ಲ. ಹಾಗಾಗಿ, ಅಪ್‌ಡೇಟ್‌ ಆಗದೆ ಉಳಿದಿವೆ.
ಎಪಿಎಲ್‌ ಸೇರಿದಂತೆ ಯಾರೂ ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ಬೆರಳಿನ ಗುರುತು ಮತ್ತು ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಯೊಂದಿಗೆ ಎಲ್ಲ ಕಾರ್ಡ್‌ಗಳನ್ನೂ ಸಕ್ರಿಯಗೊಳಿಸಲು ಅವಕಾಶ ಇದೆ. ಆಯಾ ನ್ಯಾಯಬೆಲೆ ಅಂಗಡಿ ಅಥವಾ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆ ಮುಗಿಸಬಹುದು.

Leave a Reply

error: Content is protected !!