ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ, ಸ್ಥಾಪಕ ಕಾರ್ಯದರ್ಶಿಗಳಾಗಿರುವ ಅಬ್ರಹಾಂ ವರ್ಗೀಸ್ ಅವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಸ್ಕಾರ್ಫ್ ದಿನ ಆಚರಿಸಲಾಯಿತು.
ಅಂತರಾಷ್ಟ್ರೀಯ ಸ್ಕೌಟ್ ಗೈಡ್ಸ್ ಸಂಸ್ಥೆಗೆ ಹಲವು ಅಧ್ಯಾಪಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸ್ಕಾರ್ಪ್ ಹಾಕುವುದರ ಮುಖಾಂತರ ಸೇರಿಸಿಕೊಳ್ಳಲಾಯಿತು. ಸ್ಕೌಟ್ ಪ್ರಾರ್ಥನೆಯ ಬಳಿಕ ಗೈಡ್ ಅಧ್ಯಾಪಕಿಯಾಗಿರುವ ಶ್ರೀಮತಿ ಜೆಸಿಂತಾ ಡಿಸೋಜಾ ಇವರು ಸ್ಕೌಟಿನ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಜಿಲ್ಲಾ ಸ್ಕೌಟ್ ನ ಸಹಾಯಕ ಕಮಿಷನರ್ ಆಗಿರೋ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಅಬ್ರಹಾಂ ವರ್ಗೀಸ್ ಅವರು ಮಾತನಾಡಿ, ಸ್ಕಾರ್ಫ್ ಹಾಕಿಸಿಕೊಂಡ ಎಲ್ಲರೂ ಇನ್ನಷ್ಟು ಸ್ಕೌಟ್ ವಿದ್ಯಾರ್ಥಿಗಳನ್ನು ಸ್ಕೌಟ್ ಸಂಸ್ಥೆಗೆ ಸೇರಿಸಿಕೊಳ್ಳಲು ಸಹಕರಿಸಬೇಕು ಎಂದು ಕರೆಕೊಟ್ಟರು. ಈ ಪೀಳಿಗೆ ಸ್ಕೌಟ್ ನಂತ ಶಿಸ್ತಿನ ಸಂಸ್ಥೆಯೊಂದಿಗೆ ಸೇರಿಕೊಂಡು ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ ಏಲಿಯಸ್, ಇಂಗ್ಲಿಷ್ ಮಾಧ್ಯಮದ ಮುಖ್ಯ ಗುರುಗಳಾದ ಹರಿಪ್ರಸಾದ್ ಕೆ. ರೋವರ್ ಸ್ಕೌಟ್ ಲೀಡರ್ ಆದ ಮಧು ಎ.ಜೆ. ರೇಂಜರ್ ಲೀಡರ್ ಆಗಿರುವ ಶ್ರೀಮತಿ ಜೆಸಿಂತಾ ಕೆ. ಜೆ., ಗೈಡ್ ಶಿಕ್ಷಕಿಯಾಗಿರುವ ಶ್ರೀಮತಿ ಪ್ರಫುಲ್ಲ. ಶಿಕ್ಷಕಿಯರಾದ ಶ್ರೀಮತಿ ಭವ್ಯ ಶ್ರೀಮತಿ ಸಿಮಿ, ಶಿಕ್ಷಕರಾದ ಕರುಣಾಕರ ಉಪಸ್ಥಿತರಿದ್ದರು. ಕನ್ನಡ ಮಾಧ್ಯಮದ ಮುಖ್ಯ ಗುರುಗಳು ಹಾಗೂ ಸ್ಕೌಟ್ ಮಾಸ್ಟರ್ ಆಗಿರುವ ಎಂ ಐ ಥಾಮಸ್ ಅವರು ವಂದಿಸಿದರು.