ಸಿನಿಮಾ ಸ್ಟೈಲ್​ನಲ್ಲಿ ಗಾಂಜಾ ವ್ಯಸನಿ ಆರೋಪಿ ಲಾಕ್​! ವೀಡಿಯೋ ವೈರಲ್

ಶೇರ್ ಮಾಡಿ

ಉಳ್ಳಾಲ: ಬೈಕ್ ನಲ್ಲಿ ಯರ್ರಾಬಿರ್ರಿಯಾಗಿ ಚಲಿಸಿ ರಾಜ್ಯ ಹೆದ್ದಾರಿ ನಡುವೆ ನಿಂತು ಸಾರ್ವಜನಿಕವಾಗಿ ಶಾಂತಿಭಂಗ ನಡೆಸುತ್ತಿದ್ದ ಗಾಂಜಾ ವ್ಯಸನಿಯನ್ನು ಕೊಣಾಜೆ ಠಾಣಾ ಪೊಲೀಸರು ಚಾಣಾಕ್ಷತನದಿಂದ ಹಿಡಿದು ಬಂಧಿಸಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬಕರ್ ಸಿದ್ದೀಖ್‌(24) ಬಂಧಿತ. ಗಾಂಜಾ ಸೇವಿಸಿ ಬೈಕಿನಲ್ಲಿ ಅಜಾಗರೂಕತೆಯಿಂದ ಬಂದಿದ್ದ ಆರೋಪಿ ಕೈಯಲ್ಲಿ ಚೂರಿ ಮತ್ತು ಕಲ್ಲು ಹಿಡಿದುಕೊಂಡು ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿದ್ದ. ಸ್ಥಳೀಯರು ಕೊಣಾಜೆ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕಾಗಮಿಸಿದ್ದ ನಿವೃತ್ತ ಯೋಧ ಸಂತೋಷ್ ಹಿಂಬದಿಯಿಂದ ಲಾಕ್ ಮಾಡಿ ಸಿದ್ದೀಖ್ ನನ್ನು ಬಂಧಿಸುವಲ್ಲಿ ಸಫಲರಾದರು. ಈ ವೇಳೆ ಠಾಣಾ ಸಿಬ್ಬಂದಿ ಇನ್ನೋರ್ವ ನಿವೃತ್ತ ಯೋಧ ಪೂರ್ಣೇಶ್ ಹಾಗೂ ಇನ್ನೋರ್ವರು ಸಿಬ್ಬಂದಿ ಭಾಗಿಯಾಗಿದ್ದರು.
ಘಟನೆ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

error: Content is protected !!