ಕಡಬ:ಸುಜ್ಞಾನ ನಿಧಿ ಶಿಷ್ಯವೇತನ ಹಾಗೂ ಜ್ಞಾನದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣೆ

ಶೇರ್ ಮಾಡಿ

ಸುಜ್ಞಾನ ನಿಧಿ ಶಿಷ್ಯ ವೇತನ

ವಿದ್ಯಾರ್ಥಿಗಳು ಸುಜ್ಞಾನ ನಿಧಿ ಶಿಷ್ಯ ವೇತನಕ್ಕೆ ಅರ್ಜಿ ಹಾಕಲು  ಕಾಲಾವಕಾಶವಿದೆ. ವಿದ್ಯಾರ್ಥಿ ಯೋಜನೆಯ ಸದಸ್ಯರ ಮಕ್ಕಳಾಗಿರಬೇಕು, ಯೋಜನೆಯ ಸಂಘಕ್ಕೆ ಸೇರಿ ಒಂದು ವರ್ಷವಾಗಿರಬೇಕು, ಸಂಘವು ಸಾಲ ಮರು ಪಾವತಿಯಲ್ಲಿ ಎ ಅಥವಾ ಬಿ ಶ್ರೇಣಿ ಹೊಂದಿರಬೇಕು.ವಿದ್ಯಾರ್ಥಿ ವೃತ್ತಿ ಪರ ಶಿಕ್ಷಣ ಅಥವಾ ತಾಂತ್ರಿಕ ಕೋರ್ಸು ಪಡೆಯುತ್ತಿರಬೇಕು, ಕನಿಷ್ಠ ಶೇ 60 ಅಂಕ ಗಳಿಸಿರಬೇಕು. ಹಾಗೂ ಬಡವರಾಗಿರಬೇಕು. ಇಂತವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ .

                                                                                   –   ಪ್ರವೀಣ್ ಕುಮಾರ್ ,ಯೋಜನೆಯ ಜಿಲ್ಲಾ ನಿರ್ದೆಶಕ

ನೇಸರ ಜ.21: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೀತಿಯಲ್ಲಿ ರಾಜ್ಯದೆಲ್ಲೆಡೆಯ ಮಠ ಮಂದಿರಗಳು ಕೆಲಸ ಮಾಡಿದರೆ ರಾಜ್ಯದಲ್ಲಿ ಬಡವರೇ ಇರಲಿಕ್ಕಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೆಶಕ ಪ್ರವೀಣ್ ಕುಮಾರ್ ಹೇಳಿದರು.
ಅವರು ಜ.19 ರಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ಕಛೇರಿಯಲ್ಲಿ ನಡೆದ ಯೋಜನೆಯಿಂದ ಸುಜ್ಞಾನ ನಿಧಿ ಮತ್ತು ಜ್ಞಾನ ದೀಪ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಯೋಜನೆಯಿಂದಾಗಿ ಇಂದು ಗ್ರಾಮೀಣ ಭಾಗದ ಶ್ರಮಿಕ ಕುಟುಂಬ ಆರ್ಥಿಕ ಸ್ವಾಲಂಬನೆಯೊಂದಿಗೆ ಸುಸಂಸ್ಕೃತ ಜೀವನ ನಡೆಸುತ್ತಿದ್ದಾರೆ.ಆ ಮೂಲ ಸದೃಢ ಸಮಾಜ,ಸಶಕ್ತ ನಾಡು ಕಟ್ಟುವ ಕಾರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದಾರೆ. ಯೋಜನೆಯು ಒಟ್ಟು 45 ಕಾರ್ಯಕ್ರಮಗಳಿಗೆ ಅನುದಾನ ನೀಡುತ್ತಿದ್ದು,ಮೂಲಭೂತ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗುತ್ತಿದೆ.ಶಿಕ್ಷಕರಿಲ್ಲದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದ್ದು,ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ಹೊಂದಿದೆ.ಯೋಜನೆಯ ಸದಸ್ಯರ ಮಕ್ಕಳು ವೃತ್ತಿಪರ ಶಿಕ್ಷಣ ಮಾಡುತ್ತಿದ್ದರೆ ಅವರ ಕೋರ್ಸು ಮುಗಿಯುವ ತನಕ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಪ್ರವೀಣ್ ಕುಮಾರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪುತ್ತೂರು – ಕಡಬ ತಾಲೂಕು ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಮಾತನಾಡಿ, ಯೋಜನೆಯಿಂದ ವಿದ್ಯಾರ್ಥಿ ವೇತನ ನೀಡುವ ಮುಖಾಂತರ ಸದಸ್ಯರ ಮಕ್ಕಳು ಶ್ರೀ ಕ್ಷೇತ್ರದ ಆಶೀರ್ವಾದದಿಂದ ವಿದ್ಯಾಭ್ಯಾಸ ಸಂಸ್ಕಾರಯುತವಾಗಿ ನಡೆಯಲಿ ಎನ್ನುವ ಉದ್ದೇಶ ಇದೆ.ಈ ಸದುದ್ದೇಶವನ್ನು ಸಾಕಾರಗೊಳಿಸಲು ಫಲಾನುಭವಿಗಳು ಸಹಕರಿಸಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡಬ ಸಮೂಹ ಸಂಪನ್ಮೂಲ ವ್ಯಕ್ತಿ ಕುಮಾರ್ ಅತಿಥಿಯಾಗಿ ಮಾತನಾಡಿದರು. ಕಡಬದ ಗಣೇಶ್ ಬಿಲ್ಡಿಂಗ್ ಮಾಲಕ ಸುಂದರ ಗೌಡ ಮಂಡೆಕರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಡಬ ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪೆರಬೆ ಗ್ರಾಮದ ದೇವರ ಗುಡ್ಡೆ ಭಜನಾ ಮಂದಿರ ನಿರ್ಮಾಣ ಕಾರ್ಯಕ್ಕೆ ಅನುದಾನ ಬಿಡುಗಡೆಗೊಳಿಸಿದ ಮಂಜೂರಾತಿ ಪತ್ರವನ್ನು ಭಜನಾ ಮಂಡಳಿ ಅಧ್ಯಕ್ಷ ರಾಮಚಂದ್ರ ಭಟ್ ಅತ್ರಿವನ ಅವರಿಗೆ ಹಸ್ತಾಂತರಿಸಲಾಯಿತು. ಏಳು ಜ್ಞಾನ ದೀಪ ಶಿಕ್ಷಕರು ಹಾಗೂ 31 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜಜೂರಾತಿ ಪತ್ರ ವಿತರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿದರು. ಜ್ಷಾನವಿಕಾಸ ಕೇಂದ್ರದ ಕಡಬ ತಾಲೂಕು ಸಮನ್ವಯ ಅಧಿಕಾರಿ ಶಿಲ್ಪ ವಂದಿಸಿದರು. ವಲಯ ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮ‌ ನಿರೂಪಿಸಿದರು.

Leave a Reply

error: Content is protected !!