ಕಡಿಮೆ ಅಂಕ ಕೊಟ್ಟಿದ್ದಕ್ಕೆ ಸಿಟ್ಟು- ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

ಶೇರ್ ಮಾಡಿ

ಉತ್ತರ ಪತ್ರಿಕೆಯಲ್ಲಿ ಕಡಿಮೆ ಅಂಕ ಸಿಕ್ಕರೆ ಹೆಚ್ಚಂದ್ರೆ 2 ದಿನ ಬೇಜಾರಾಗಬಹುದು ಅಷ್ಟೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ಇದೇ ಸಿಟ್ಟಿನಿಂದ ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆ ಹಾಕಿದ ಪ್ರಸಂಗವೊಂದು ಮಂಗಳೂರಿನಲ್ಲಿ‌ ನಡೆದಿದೆ.

ನಗರದ ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಗಣಿತ ವಿಷಯದಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಒಂದು ಅಂಕ ಕಡಿಮೆ ಕೊಟ್ಟಿದ್ದರು. ಇದರಿಂದ ವಿದ್ಯಾರ್ಥಿನಿ ಕುಪಿತಗೊಂಡಿದ್ದಳು.

ಟೀಚರ್ ಸರಿ ಉತ್ತರಕ್ಕೆ ಮಾರ್ಕ್ಸ್ ನೀಡಿಲ್ಲ ಎಂದು ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಕೋಪದಲ್ಲಿದ್ದಳು. ಇದೇ ಸಿಟ್ಟಿನಿಂದ ಶಿಕ್ಷಕಿಗೆ ಏನಾದರೂ ಮಾಡಬೇಕು ಎಂದು ಯೋಚಿಸಿದ್ದಳು. ಅಂತೆಯೇ ಇನ್ನೊಬ್ಬ ವಿದ್ಯಾರ್ಥಿನಿಯ ಜೊತೆ ಸೇರಿ ಶಿಕ್ಷಕಿಯ ನೀರಿನ ಬಾಟ್ಲಿಗೆ ಅವಧಿ ಮುಗಿದ ಮಾತ್ರೆಗಳನ್ನು ಹಾಕಿದ್ದಾರೆ.

ಇತ್ತ ಇದನ್ನು ಅರಿಯದ ಗಣಿತ ಶಿಕ್ಷಕಿ ಹಾಗೂ ಸಹ ಶಿಕ್ಷಕಿ ನೀರು ಸೇವನೆ ಮಾಡಿದ್ದಾರೆ. ನೀರು ಕುಡಿದ ಕೆಲ ಹೊತ್ತಿನ ಬಳಿಕ ಓರ್ವ ಶಿಕ್ಷಕಿಯ ಮುಖ ಊದಿಸಿಕೊಳ್ಳಲು ಪ್ರಾರಂಭವಾದರೆ, ಇನ್ನೋರ್ವ ಶಿಕ್ಷಕಿ ಅಸ್ವಸ್ಥರಾಗಿದ್ದಾರೆ.

ಸದ್ಯ 6 ನೇ ತರಗತಿ ವಿದ್ಯಾರ್ಥಿನಿಯರ ಈ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿನಿಯರ ವಿರುದ್ಧ ಕ್ರಮಕೊಳ್ಳಲಾಗಿದೆ.

Leave a Reply

error: Content is protected !!