ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆ: ರಾಜ್ಯ ಹೆದ್ದಾರಿಯ ಕಿರು ಸೇತುವೆ ಮುಳುಗಡೆ

ಶೇರ್ ಮಾಡಿ

ಸುಳ್ಯ ಮತ್ತು ಕಡಬ ತಾಲೂಕುಗಳ ವಿವಿಧೆಡೆ ರವಿವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಯ ಪರಿಣಾಮ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕೈಕಂಬ ಬಳಿಯ ಕಿರುಸೇತುವೆ ಮುಳುಗಡೆಯಾಯಿತು. ಸ್ವಲ್ಪ ಸಮಯ ರಸ್ತೆ ಬಂದ್‌ ಆಗಿ ಸಂಚಾರಕ್ಕೆ ತೊಡಕು ಉಂಟಾಯಿತು.

ಸುಬ್ರಹ್ಮಣ್ಯ ಸೇರಿದಂತೆ ಕೈಕಂಬ, ಬಿಳಿನೆಲೆ, ಹರಿಹರ, ಐನೆಕಿದು, ಬಾಳುಗೋಡು, ಕಲ್ಲಾಜೆ, ಗುತ್ತಿಗಾರು, ಪಂಜ ಭಾಗಗಳಲ್ಲಿ 1 ತಾಸು ಕಾಲ ಗುಡುಗು ಸಹಿತ ಮಳೆಯಾಯಿತು. ಕುಮಾರ ಪರ್ವತ ಭಾಗದಲ್ಲಿ ಕೂಡ ಭಾರೀ ಮಳೆ ಸುರಿದ ಪರಿಣಾಮ ಕುಕ್ಕೆಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದರ್ಪಣತೀರ್ಥ ನದಿ ಕೂಡ ತುಂಬಿ ಹರಿಯಿತು.

Leave a Reply

error: Content is protected !!
%d bloggers like this: