ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಶೇರ್ ಮಾಡಿ

ಪತ್ನಿಯನ್ನು ಬರ್ಬರವಾಗಿ 2020 ರಲ್ಲಿ ಕೊಂದಿದ್ದ ಭಾರತೀಯ ವ್ಯಕ್ತಿಗೆ ಫ್ಲೋರಿಡಾದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ವರದಿಗಳ ಪ್ರಕಾರ ದೋಷಿ ಫಿಲಿಪ್ ಮ್ಯಾಥ್ಯೂ ತನ್ನ ಪತ್ನಿ ಮೆರಿನ್ ಜಾಯ್‌ಗೆ 2020ರಲ್ಲಿ 17 ಬಾರಿ ಚಾಕುವಿನಿಂದ ಇರಿದು ಮಾತ್ರವಲ್ಲದೇ ಆಕೆಯ ಕಾರನ್ನು ತೆಗೆದುಕೊಂಡು ಆಕೆಯ ದೇಹದ ಮೇಲೆ ಹರಿಸಿ, ಸ್ಥಳದಿಂದ ಪರಿಯಾಗಿದ್ದ.

ದಂಪತಿ ಮೂಲತಃ ಕೇರಳದವರು. ಕೇರಳದ ಕೊಟ್ಟಾಯಂ ಮೂಲದ ಮೆರಿನ್ ಜಾಯ್ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಹೊರಗಡೆ ಆಕೆಯ ಪತಿ ಮ್ಯಾಥ್ಯೂ ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ಬಳಿಕ ಜಾಯ್‌ನ ಸಹೋದ್ಯೋಗಿಯೊಬ್ಬರು ವ್ಯಕ್ತಿಯೊಬ್ಬ ಆಕೆಯ ದೇಹದ ಮೇಲೆ ಕಾರನ್ನು ಓಡಿಸಿದ್ದನ್ನು ನೋಡಿದ್ದಾಗಿ ತಿಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಪದೇ ಪದೇ ಅಳಲು ಮಾತ್ರವೇ ಸಾಧ್ಯವಾಗುತ್ತಿತ್ತು. ಈ ವೇಳೆ ಆಕೆ ತನಗೆ ಒಂದು ಮಗುವಿದೆ ಎಂದು ಹೇಳಿದ್ದಾಗಿ ತಿಳಿಸಿದ್ದರು.

ಜಾಯ್ ಸಾವನ್ನಪ್ಪುವುದಕ್ಕೂ ಮುನ್ನ ಪತಿಯ ಬಗ್ಗೆ ಹೇಳಿದ್ದಳು. ಇದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿತ್ತು. ನವೆಂಬರ್ 3 ರಂದು ಫ್ಲೋರಿಡಾದ ನ್ಯಾಯಾಲಯ ಆತನಿಗೆ ಅಂತಿಮವಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೆರಿನ್ ಜಾಯ್ ಫಿಲಿಪ್ ಮ್ಯಾಥ್ಯೂ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಈ ಹಿನ್ನೆಲೆ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ.

Leave a Reply

error: Content is protected !!