ಆಲಂಕಾರು: ಇಲ್ಲಿನ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ CET/NEET ತರಬೇತಿ ತರಗತಿ ಉದ್ಘಾಟನೆ.
ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಧಾರ್ಮಿಕ ನೇತಾರರಾದ ಶ್ರೀಯುತ ಈಶ್ವರ ಗೌಡ ಪಜ್ಜಡ್ಕ ಇವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಪ್ರವೇಶಾತಿ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಕೊನೆಯ ಕ್ಷಣದಲ್ಲಿ ಆಗುವ ಒತ್ತಡ ಹಾಗೂ ಗೊಂದಲಗಳನ್ನು ನಿವಾರಿಸಲು, ಏಳವೆಯಿಂದಲೇ ಅವರಗಳನ್ನು ಸರಿಯಾದ ರೀತಿಯಲ್ಲಿ ತರಬೇತಿ ಗೊಳಿಸಿದರೆ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತಿ ಆಂಗ್ಲ ಮಾಧ್ಯಮದ ಪ್ರಾಢಶಾಲೆಯ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿಯನ್ನು ಒತ್ತಡ ಆಗದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾಗಿ ನೀಡುತ್ತೇವೆ ಎಂದು ನುಡಿದರು.
ಆಂಗ್ಲ ಮಾಧ್ಯಮದ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರಾದ ಗಣೇಶ ಹಿರಿಂಜ, ಸಮಾಯೋಚಿತವಾಗಿ ಮಾತನಾಡುತ್ತಾ, ಸಂಸ್ಥೆಯ ನಿರ್ಧಾರವನ್ನು ತಮ್ಮ ಮಾತುಗಳಲ್ಲಿ ಶ್ಲಾಘಿಸಿದರು. ಮುಖ್ಯಗುರುಗಳಾದ ಸತೀಶ್ ಕುಮಾರ್ ಜಿ ಆರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಅವರು ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ಏಳವೆಯಿಂದಲೇ ನಿರಂತರವಾಗಿ ನೀಡುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯಗುರುಗಳಾದ ಆಶಾ ಎಸ್ ರೈ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಕೋಶದ ಸಂಯೋಜಕರಾದ ಜ್ಯೋತಿ ಬಿ ಉಪಸ್ಥಿತರಿದ್ದರು.
ಸಹ ಸಂಯೋಜಕರಾದ ದೀಕ್ಷಿತಾ ಕುಮಾರಿ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿಗಳಾದ ಸ್ವಸ್ತಿಕ್ ಎ.ಕೆ., ಸ್ವಾಗತಿಸಿ, ಶಾಲಾ ನಾಯಕಿ ಇಂಚರ ವಂದಿಸಿದರು. ಅಕ್ಷ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.