ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಮಾರ್ ಜಾರ್ಜ್ ವಲಿಯಮಟ್ಟಮ್ ನೆಲ್ಯಾಡಿ ಸಂತ ಅಲ್ಫೋನ್ಸಪುಣ್ಯ ಕ್ಷೇತ್ರಕ್ಕೆ ಭೇಟಿ

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಒಳಗೊಂಡ ತಲಶೇರಿ ಮಹಾ ಧರ್ಮ ಪ್ರಾಂತ್ಯದ ವಿಶ್ರಾಂತ ಮಹಾ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಜಾರ್ಜ್ ವಲಿಯಮಟ್ಟಮ್ ಅವರು ಭಾನುವಾರ ನೆಲ್ಯಾಡಿಯ ಪ್ರತಿಷ್ಟಿತ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನು ನೆರವೇರಿಸಿದರು.

ಪೂಜ್ಯರನ್ನು ಉದನೆ ಫೋರೋನ ಧರ್ಮ ಕೇಂದ್ರದ ವಂ.ತೋಮಸ್ ಪನಚಿಕ್ಕಲ್, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಜುಡಿಶಿಯಲ್ ವಿಕಾರ್ ವಂ.ಫಾ.ಕುರಿಯಾಕೋಸ್ ವೆಟ್ಟುವಯಿ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.

ಪೂಜ್ಯರು ನೆಲ್ಯಾಡಿಯ ಚರ್ಚ್ ನ ಸಮಗ್ರ ಬೆಳವಣಿಗೆಯ ಮಾಹಿತಿ ಪಡೆದರು. ಧರ್ಮ ಗುರುಗಳಾದ ವಂ.ಫಾ.ಶಾಜಿ ಮಾತ್ಯು ಸ್ವಾಗತಿಸಿದರು.

Leave a Reply

error: Content is protected !!