ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ವಲಯದ ಪಿಜಕ್ಕಳ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡನಾಟಿ ಕಾರ್ಯಕ್ರಮ

ಶೇರ್ ಮಾಡಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ವಲಯದ ಪಿಜಕ್ಕಳ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಜಾಗೃತಿ ಹಾಗೂ ಗಿಡನಾಟಿ ಕಾರ್ಯಕ್ರಮವು ನಡೆಯಿತು.

ಪಂಜ ವಲಯದ ಅರಣ್ಯಾಧಿಕಾರಿ ಅಜಿತ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಇದನ್ನು ಅರಿತು ಕೊಂಡು ಮನೆ ಮನೆಯಲ್ಲಿ ಪರಿಸರ ಉಳಿಸಿ ಅಭಿಯಾನ ಪ್ರಾರಂಭಿಸಬೇಕು.ಗಿಡ ನೆಟ್ಟು ಪೋಷಿಸುವ ಕುಟುಂಬಕ್ಕೆ ಸರಕಾರದಿಂದ ಸಹಾಯದನದೊಂದಿಗೆ ಗಿಡಗಳ ಪೂರೈಕೆಯನ್ನು ಉಚಿತವಾಗಿ ನೀಡಲಾಗುವುದು ಎಂದರು.

ಪ್ರತೀ ಮನೆಯಲ್ಲಿ ವರ್ಷಕೊಮ್ಮೆ ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಒಂದುಗಿಡವನ್ನು ನೆಟ್ಟು ಆಚರಿಸುವಂತಾಗಬೇಕು … ನೆಟ್ಟ ಗಿಡವನ್ನು ರಕ್ಷಣೆ ಮಾಡುವ ಹೊಣೆಯೂ ನಮ್ಮದಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಜಕ್ಕಳ ಒಕ್ಕೂಟದ ಅಧ್ಯಕ್ಷ ಜನಾರ್ಧನ ನಾಯ್ಕ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಶಿಪ್ರಭ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ,ಸೇವಾಪ್ರತಿನಿಧಿ ಸಂಧ್ಯಾ ಉಪಸ್ಥಿತರಿದ್ದರು.

ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ಸೇವಾಪ್ರತಿನಿದಿ ಸರಿತಾ ವಂದಿಸಿದರು.ಕಡಬ ಶೌರ್ಯ ಘಟಕದ ಸ್ವಯಂಸೇವಕರು ಶಾಲಾ ಆವರಣದಲ್ಲಿ ಹಣ್ಣಿ ನ ಗಿಡಗಳನ್ನು ನಾಟಿ ಮಾಡಿದರು.

Leave a Reply

error: Content is protected !!