ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ: ವಿದ್ಯಾರ್ಥಿ ವೇತನದೊಂದಿಗೆ ಕಲಿಕೆ

ಶೇರ್ ಮಾಡಿ

ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ಬೆಥನಿ ನವಜ್ಯೋತಿ ಪ್ರಾಂತ್ಯದ ಅಧೀನದಲ್ಲಿ ಆರ್ಡರ್ ಆಫ್ ಇಮಿಟೇಶನ್ ಆಫ್ ಕ್ರೈಸ್ಟ್ (OIC) ಧರ್ಮಗುರು ಸಮೂಹವು ನಡೆಸುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ.

ಕಳೆದ 35 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮೀಣ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸುತ್ತಲೂ ಹಚ್ಚ ಹಸಿರಿನಿಂದ ತುಂಬಿರುವ ರಾಷ್ಟ್ರೀಯ ಹೆದ್ದಾರಿ 75ರ ಮಗ್ಗುಲಲ್ಲಿ ನೆಲೆಗೊಂಡಿರುವ ಈ ಶಿಕ್ಷಣ ಸಂಸ್ಥೆ ಪ್ರತಿ ಮಗುವಿಗೆ ತಮ್ಮನ್ನು ತಾವು ಪರಿಪಕ್ವಗೊಳಿಸಿ ಪೂರ್ಣ ಸಾಮರ್ಥ್ಯಕ್ಕೆ ಅರಳಲು ಅತ್ಯುತ್ತಮ ಅವಕಾಶವನ್ನು ಒದಗಿಸಿದೆ. ಸಂಸ್ಥೆಯು ಪ್ರಿ-ಕೆಜಿ ಯಿಂದ ಪದವಿಪೂರ್ವ ವರೆಗಿನ(ಕಿಂಡರ್ ಗಾರ್ಡನ್ – 12 ಪಿಯು) ತರಗತಿಗಳನ್ನು ಹೊಂದಿದೆ.

ಪದವಿಪೂರ್ವ ವಿಭಾಗದಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿವೆ. ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಕಲಿಕೆಯಲ್ಲಿ ಹೊಸತನವನ್ನು ರೂಪಿಸಿದ್ದು, ಸುಲಭ ಮತ್ತು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳಲು ಸುಸಜ್ಜಿತ ವಿಜ್ಞಾನ ಲ್ಯಾಬ್, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, AI ಮತ್ತು STEM ಲ್ಯಾಬ್ ಮತ್ತು ಡಿಜಿಟಲ್ ಬೋರ್ಡ್ ಗಳೊಂದಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಹೊಂದಿದೆ. 1ರಿಂದ 9ನೇ ತರಗತಿಗಳಿಗೆ AI ಮತ್ತು STEM ಶಿಕ್ಷಣವನ್ನು ನೀಡುತ್ತಿದ್ದು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯಗಳು ಲಭ್ಯವಿದೆ

ಬೆಥನಿ ನವಜ್ಯೋತಿ ಪ್ರಾಂತ್ಯದ ರಜತ ಮಹೋತ್ಸವದ ಸಂದರ್ಭದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜು ವತಿಯಿಂದ 1,50,000/-ರೂ ವಿದ್ಯಾರ್ಥಿವೇತನವನ್ನು ಮೀಸಲಿಟ್ಟು, ಆ ಹಣದಿಂದ ಪ್ರತಿಭಾವಂತ ಮಕ್ಕಳಿಗೆ ಜೀವನದಲ್ಲಿ ಅವರ ಕನಸುಗಳನ್ನು ನನಸಾಗಿಸಲು ಆರ್ಥಿಕ ಸಹಾಯವನ್ನು ಒದಗಿಸುವುದು. ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿರುವ ಯಾವುದೇ ವಿದ್ಯಾರ್ಥಿಯು ಮಾಧ್ಯಮ ಮತ್ತು ಬೋರ್ಡ್ ಅನ್ನು ಲೆಕ್ಕಿಸದೆ ವಿದ್ಯಾರ್ಥಿವೇತನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪರೀಕ್ಷೆಗಳನ್ನು ಜನವರಿ 4, 2025ರಂದು ಶನಿವಾರ ಬೆಳಿಗ್ಗೆ 10:30 ರಿಂದ ನಡೆಸಲಾಗುವುದು.

ಪರೀಕ್ಷೆಯು ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ತಲಾ 25 ಅಂಕಗಳ ಮೂರು ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯವು 15 ಅಂಕಗಳ MCQ ಗಳು ಮತ್ತು 10 ಅಂಕಗಳ ವಿವರಣಾತ್ಮಕ ಪ್ರಶ್ನೆಗಳನ್ನು ಹೊಂದಿದೆ. ಪರೀಕ್ಷೆಯ ಅವಧಿ 2 ಗಂಟೆಗಳು.

ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ 30,000/- ರೂ ನಗದು ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗೆ 20,000/- ರೂ ಮತ್ತು ಸ್ಥಾನ ಗಳಿಸಿದ ವಿದ್ಯಾರ್ಥಿಗೆ 15,000 ರೂ ನಗದು ಬಹುಮಾನ ಹಾಗೂ ಮುಂದಿನ 7ಸ್ಥಾನಗಳಿಗೆ ತಲಾ 10,000/-ರೂ ಮತ್ತು ಮುಂದಿನ 3 ಸ್ಥಾನಗಳಿಗೆ 5,000/- ರೂ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ ಅಥವಾ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2024.

ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
www.jnanodayabethanycollege.com
ಇ.ಮೇಲ್ : [email protected]

ಕಛೇರಿ : 9845 601813
ಪ್ರಾಂಶುಪಾಲರು : 8281 859667
ಉಪ ಪ್ರಾಶುಪಾಲರು : 7760 229605
ಮುಖ್ಯೋಪಾಧ್ಯಾಯರು : 9483 909796

Leave a Reply

error: Content is protected !!