ನೆಲ್ಯಾಡಿ ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್(ರಿ) ಇದರ ಉದ್ಘಾಟನಾ ಸಮಾರಂಭ ಡಿ.22ರಂದು ಎಂಜಿರದಲ್ಲಿ ನಡೆಯಿತು.
ಬೆಳಗ್ಗೆ ವಿಶ್ವಕರ್ಮ ಪೂಜೆ ಹಾಗೂ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮವನ್ನು ಹಿರಿಯರಾದ ತಂಗಪ್ಪನ್ ಹೊಸಮಠ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಟ್ರಸ್ಟ್ ನ ಕಚೇರಿಯನ್ನು ಮಂಗಳೂರು ಕರ್ನಾಟಕ ಮಲಯಾಳಿ ವಿಶ್ವಕರ್ಮ ಸಮಾಜಂ ನ ಸಂದೇಶ್.ಎಂ ಅವರು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಯಾಳಿ ವಿಶ್ವಕರ್ಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಸಜಿ.ಎನ್ ನೆಲ್ಯಾಡಿ ವಹಿಸಿದ್ದರು.ನೆಲ್ಯಾಡಿ ಕೆನರಾ ಬ್ಯಾಂಕ್ ನ ಪ್ರಬಂಧಕರಾದ ವಿವಿನ್ ಜೆಕಬ್, ಪುರೋಹಿತರಾದ ಸಚಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಸಜೇಶ್ ಗೇರುಕಟ್ಟೆ ಅವರ ಆತ್ಮಶಾಂತಿಗಾಗಿ ಮೌನ ಪ್ರಾರ್ಥನೆಯನ್ನುಮಾಡಲಾಯಿತು. ಓಣಂ ಹಬ್ಬದ ಪ್ರಯುಕ್ತ ನಡೆಸಿದ ಆಟೋಟ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಹಿರಿಯರಾದ ತಂಗಪ್ಪನ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.