ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ರೂ.2 ಲಕ್ಷ ಸಹಾಯಧನ ಹಸ್ತಾಂತರ

ಶೇರ್ ಮಾಡಿ

ಕೊಕ್ಕಡ: ಪಟ್ರಮೆ ಗ್ರಾಮದ ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಿದ ಎರಡು ಲಕ್ಷ ರೂಪಾಯಿ ಸಹಾಯಧನವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ಸಮಿತಿ ಅಧ್ಯಕ್ಷರು ದೇವಪಾಲ ಅಜ್ರಿ, ಕಾರ್ಯದರ್ಶಿ ಪುರಂದರ, ನಿರ್ದೇಶಕರಾದ ರುಕ್ಮಯ್ಯ, ಚೆನ್ನಪ್ಪ, ಕೇಶವ, ಚೇತನ್, ಹಾಲು ಪರಿವೀಕ್ಷಕಿ ಭವ್ಯ ರವರಿಗೆ ಹಸ್ತಂತಾರಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ವಲಯ ಮೇಲ್ವಿಚಾರಕರು ಭಾಗೀರಥಿ, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಆನಂದ ಗೌಡ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್, ನಿಕಟ ಪೂರ್ವ ಒಕ್ಕೂಟದ ಕಾರ್ಯದರ್ಶಿ ಶಾಹಿದ, ಸೇವಾಪ್ರತಿನಿಧಿ ಸುಮಿತ್ರ ಹಾಗೂ ಊರಿನ ಗಣ್ಯರು ಸಂಘದ ಸದಸ್ಯರು ಉಸ್ಥಿತರಿದ್ದರು.

  •  

Leave a Reply

error: Content is protected !!