ನೆಲ್ಯಾಡಿ: ಬಲ್ಯ ನೋಣಯ್ಯ ಗೌಡರಿಗೆ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ’

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ನೆಲ್ಯಾಡಿ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಬಲ್ಯ ಗ್ರಾಮದ ಕಡ್ತಿಮಾರ್ ನಿವಾಸಿ ನೋಣಯ್ಯ ಗೌಡ ಅವರಿಗೆ ನೀಡಿ ಗೌರವಿಸಲಾಯಿತು.

ನೋಣಯ್ಯ ಗೌಡ ಅವರು ಕಳೆದ 25 ವರ್ಷಗಳಿಂದ ಅಡಿಕೆಗೆ ಮದು ಸಿಂಪಡಣೆ, ಅಡಿಕೆ, ತೆಂಗಿನ ಕಾಯಿ ತೆಗೆಯುವ ಕೆಲಸ ಹಾಗೂ ಇತರ ದಿನಗಳಲ್ಲಿ ಕೂಲಿ ಕೆಲಸ ಮಾಡಿ ಶ್ರಮ ಜೀವಿ ಆಗಿದ್ದಾರೆ. ಇವರ ಶ್ರಮ ಗುರುತಿಸಿ ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಲ್, ಮಹಿಳಾ ಜೆಸಿ ಅಧ್ಯಕ್ಷೆ ಪ್ರವೀಣಿ ಶೆಟ್ಟಿ, ಕಾರ್ಯದರ್ಶಿ ನವ್ಯ ಪ್ರಸಾದ್, ಪುರಂದರ ಗೌಡ, ಗಣೇಶ್ ರಶ್ಮಿ, ದಯಾಕರ, ಲೀಲಾ ಮೋಹನ್, ಜಾಹ್ನವಿ, ದಯಾನಂದ, ಪ್ರಸಾದ್ ಹಾಗೂ ಇತರರು ಪಾಲ್ಗೊಂಡಿದ್ದರು.

  •  

Leave a Reply

error: Content is protected !!