
ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯದ ಮಾದೇರಿ ಒಕ್ಕೂಟದ ವತಿಯಿಂದ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರುಗೊಂಡ 10 ಜೊತೆ ಡೆಸ್ಕ್ -ಬೆಂಚುಗಳ ಹಸ್ತಾಂತರ ಕಾರ್ಯಕ್ರಮವನ್ನು ಪುಚ್ಚೇರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪ್ರಾಕ್ರತಿಕ ವಿಕೋಪದಿಂದ ಕೃಷಿಗೆ ಹಾನಿಯಾಗಿರುವ ಬಗ್ಗೆ ಧರ್ಮಸ್ಥಳ ಯೋಜನೆಗೆ ಮನವಿಯನ್ನು ನೀಡಿದ್ದು, ಸಹಾಯಧನದ ಮಂಜೂರಾತಿ ಪತ್ರವನ್ನು ಯಶ್ವಿನಿ ಮತ್ತು ಅಮಿತಾರವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿನ್.ಪಿ.ಜೆ ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ಮೋಹನ.ಪಿ, ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ ಕೃಷಿ ಮೇಲ್ವಿಚಾರಕರಾದ ಸೋಮೇಶ್, ಶಾಲಾ ಮುಖ್ಯ ಗುರುಗಳಾದ ಪದ್ಮನಾಭ, ಶಾಲಾ ಆಡಳಿತ ಸಮಿತಿ ಉಪಾಧ್ಯಕ್ಷರಾದ ಯಶವಂತ, ಶಿಕ್ಷಕರಾದ ಪುರಂದರ, ಅಧ್ಯಾಪಕ ವೃಂದದವರು, ಶಾಲಾ ಮಕ್ಕಳು, ಸೇವಾ ಪ್ರತಿನಿಧಿಗಳಾದ ಸಂತೋಷ್ ಮತ್ತು ಕವಿತಾರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆ ಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಡಲಾಯಿತು.






