ಕೊಕ್ಕಡ: ಶ್ರೀ ಕೃಷ್ಣ ಭಜನಾ ಮಂದಿರ ಪುನರ್ ನಿರ್ಮಾಣಕ್ಕೆ ಧರ್ಮಸ್ಥಳದಿಂದ 1 ಲಕ್ಷ ರೂ. ಸಹಾಯ

ಶೇರ್ ಮಾಡಿ

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ಕೃಷ್ಣ ಭಜನಾ ಮಂದಿರ ಪುನರ್ ನಿರ್ಮಾಣಕ್ಕಾಗಿ 1 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ಸಂಬಂಧ ಮಂಜೂರಾತಿ ಪತ್ರವನ್ನು ಯೋಜನಾಧಿಕಾರಿ ಯಶೋಧರ ರವರು ಶ್ರೀ ಕೃಷ್ಣ ಭಜನಾ ಮಂದಿರದ ಟ್ರಸ್ಟ್‌ಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಯಶೋಧರ ರವರು, “ಹಿಂದೂ ಸಮಾಜದ ಒಗ್ಗಟ್ಟಿಗೆ ಭಜನಾ ಮಂದಿರಗಳು ಸಾಕ್ಷಾತ್ ಸಂಕೇತವಾಗಿದ್ದು, ಈ ಮದರಿಯಿಂದ ಸಮಾಜ ಸಾಂಸ್ಕೃತಿಕವಾಗಿ ಬಲಗೊಳ್ಳಲಿ” ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಗೌರವಧ್ಯಕ್ಷ ಯೋಗೀಶ್ ಅಲಂಬಿಲ, ಅಧ್ಯಕ್ಷ ಶ್ರೀನಾಥ್ ಬಡೆಕಾಯಿಲ್, ಪ್ರಾರಂಬೊತ್ಸವ ಸಮಿತಿಯ ಕಾರ್ಯದರ್ಶಿ ಶಿವಾನಂದ ಸಂಕೇಶ, ಶ್ರದ್ದಾ ಗೆಳೆಯರ ಬಳಗದ ಪದಾಧಿಕಾರಿಗಳು, ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯ ಮೇಲ್ವಿಚಾರಕಿ ಶ್ರೀಮತಿ ಭಾಗೀರಥಿ, ಉಪ್ಪಾರಪಳಿಕೆ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಮರುವಂತಿಲ ಹಾಗೂ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

ಟ್ರಸ್ಟ್ ಹಾಗೂ ಸಮಿತಿಗಳ ಪರವಾಗಿ ಧರ್ಮಸ್ಥಳದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಯವರಿಗೆ ಹಾಗೂ ಯೋಜನೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

  •  

Leave a Reply

error: Content is protected !!