


ಕೊಕ್ಕಡ/ನೆಲ್ಯಾಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಇದರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ನೆಲ್ಯಾಡಿ ವಲಯದ ಕಟ್ಟೆಮಜಲು ಕಾರ್ಯಕ್ಷೇತ್ರದಿಂದ ಪಟ್ಲಡ್ಕದ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ 29ನೇ ಭಜನ ಕಮ್ಮಟದ ಉದ್ಘಾಟನೆ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ಅಧ್ಯಕ್ಷರಾದ ಸುಂದರ ಗೌಡ ಒಗ್ಗು ನೆರವೇರಿಸಿದರು. ಅವರು ಮಾತನಾಡುತ್ತಾ, “ಪಟ್ಲಡ್ಕದ ಈ ಪವಿತ್ರ ಭೂಮಿಯಲ್ಲಿ 29ನೇ ಭಜನ ಕಮ್ಮಟ ಆರಂಭವಾಗುತ್ತಿದೆ. ಇದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ವಹಿಸಿಕೊಂಡು, “ಇಂದು ನಡೆಯುತ್ತಿರುವ ಈ ಭಜನೆಯ ಕನಸು ನಿನ್ನೆ ಮೊನ್ನೆಯದು ಅಲ್ಲ, ಇದು 20 ವರ್ಷಗಳ ಹಿಂದಿನ ಕನಸು. ಭಜನೆ ಎಂದರೆ ಸಂಸ್ಕೃತಿ. ಭಜನೆ ಉಳಿದರೆ ನಮ್ಮ ಸಂಸ್ಕೃತಿಯೇ ಉಳಿಯುತ್ತದೆ” ಎಂದು ಹೇಳಿದರು.
ಭಜನಾ ತರಬೇತುದಾರರಾದ ಜನಾರ್ದನ ಗೌಡ ಬಿಳಿನೆಲೆ, ದಯಾನಂದ ಬಿಳಿನೆಲೆ, ಉಪಾಧ್ಯಕ್ಷ ಹರೀಶ್ ಪಟ್ಲಡ್ಕ, ಆಡಳಿತ ಮೊಕ್ತೇಸರು ವಿಶ್ವನಾಥ ಪಟ್ಲಡ್ಕ, ಉಪಾಧ್ಯಕ್ಷ ಉಮೇಶ್, ಸೇವಾಪ್ರತಿನಿಧಿ ಸುಮನ್ ಎಸ್, ಭಜನಾ ತಂಡದ ಅಧ್ಯಕ್ಷೆ ಗೀತಾ ಆರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲತಾ ವಿಠಲ ಪ್ರಾರ್ಥನೆ ನೆರವೇರಿಸಿದರು. ಸೇವಾಪ್ರತಿನಿಧಿ ಸುಮನ್.ಎಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ದೀಕ್ಷಾ ಸಾಲ್ಯಾನ್ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳು ಪ್ರಕಾಶ್ ರೈ, ಪ್ರಕಾಶ್ ರಾವ್, ನವೀನ್ ಪೂಜಾರಿ, ಗ್ರಾ.ಪಂ. ಸದಸ್ಯ ಮಹೇಶ್ ಪಟ್ಲಡ್ಕ ಹಾಗೂ ಕುಣಿತ ಭಜನೆಯ ಸದಸ್ಯರುಗಳು ಉಪಸ್ಥಿತರಿದ್ದರು.










