ಉದನೆ ಸಂತ ತೋಮಸರ ಪೊರೋನಾ ದೇವಾಲಯದಲ್ಲಿ ಮೇ 9ರಿಂದ 11ರ ವರೆಗೆ ವಾರ್ಷಿಕ ಹಬ್ಬ ಹಾಗೂ ತಿರುಶೇಷಿಪ್ಪ್ ವಣಕ್ಕಂ

ಶೇರ್ ಮಾಡಿ
default

ನೆಲ್ಯಾಡಿ: ಉದನೆ ಸಂತ ತೋಮಸರ ಪೊರೋನಾ ದೇವಾಲಯದಲ್ಲಿ ಮೇ 9 ರಿಂದ 11ರ ವರೆಗೆ ವಿಜೃಂಭಣೆಯ ವಾರ್ಷಿಕ ಹಬ್ಬ ಹಾಗೂ ತಿರುಶೇಷಿಪ್ಪ್ ವಣಕ್ಕಂ ಕಾರ್ಯಕ್ರಮ ನಡೆಯಲಿದೆ.

ಮೇ.9ರಂದು ಸಂಜೆ 4:30 ರಿಂದ ಧ್ವಜಾರೋಹಣ, ದಿವ್ಯ ಬಲಿ ಪೂಜೆ ಹಾಗೂ ಸಮಾಧಿ ಸಂದರ್ಶನ. ಮೇ 10ರಂದು ಸಂಜೆ 4:00 ರಿಂದ ಪವಿತ್ರ ಸ್ವರೂಪಗಳ ಪ್ರತಿಷ್ಠೆ, ದಿವ್ಯ ಬಲಿ ಪೂಜೆ, ಹಬ್ಬದ ಸಂದೇಶ, ಲದೀಞï, ಹಬ್ಬದ ಮೆರವಣಿಗೆ, ಸಮಾರೋಪ ಆಶೀರ್ವಾದ, ಸ್ನೇಹ ಭೋಜನ ಮತ್ತು ರಾತ್ರಿ 7:45 ರಿಂದ ಲೇಸರ್ ಶೋ, ಮೇಘ ಲೈವ್ ಮ್ಯೂಸಿಕ್. ಮೇ.11ರಂದು ಸಂಜೆ 4:30 ರಿಂದ ವಿಜೃಂಭಣೆಯ ಹಬ್ಬದ ದಿವ್ಯ ಬಲಿ ಪೂಜೆ, ಪ್ರವಚನ, ಧರ್ಮಧ್ಯಕ್ಷರಾದ ಪರಮಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ, ಲದೀಞï, ಮೆರವಣಿಗೆ, ಸಮಾರೋಪ ಆಶೀರ್ವಾದ ಹಾಗೂ ಸ್ನೇಹ ಭೋಜನ ಕಾರ್ಯಕ್ರಮಗಳು ನಡೆಯಲಿದೆ.

ಈ ಹಬ್ಬದ ಎಲ್ಲ ಕಾರ್ಯಚಟುವಟಿಗೆಗಳಿಗೆ ಸಂತೋಷ್ ಕುಳತ್ತಿನಾಳ್ ಮತ್ತು ಅವರ ಕುಟುಂಬವು ಸಹಕಾರ ನೀಡುತ್ತಿದ್ದಾರೆ ಎಂದು ರೆ.ಫಾ.ಸಿಬಿ ತೋಮಸ್, ಆಡಳಿತ ಮಂಡಳಿ ಹಾಗೂ ಧರ್ಮಕ್ಷೇತ್ರದ ಸದಸ್ಯರು ತಿಳಿಸಿದ್ದಾರೆ.

  •  

Leave a Reply

error: Content is protected !!