

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಜು.11 ರಂದು ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಮೀಸಲಿಟ್ಟ ಜಾಗದಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಕಾರ್ತಿಕೇಯನ್ ಅವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. “ಶಿರಾಡಿ ಈಗಾಗಲೇ ಗ್ರಾಮೀಣ ಪರಿಸರದಲ್ಲಿ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಆರೋಗ್ಯ ಕೇಂದ್ರ, ಪಶುಚಿಕಿತ್ಸಾಲಯ, ಗ್ರಂಥಾಲಯ, ಬ್ಯಾಂಕ್ ಸೇರಿ ಹಲವಾರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾ.ಪಂ. ಕಚೇರಿಯನ್ನೂ ಈ ಕೇಂದ್ರಸ್ಥಾನಕ್ಕೆ ಸ್ಥಳಾಂತರಿಸುವ ಉದ್ದೇಶದಿಂದ ಈ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭವಾಗಿದೆ,” ಎಂದು ವಿವರಿಸಿದರು.
ಈ ಯೋಜನೆಗಾಗಿ ಈಗಾಗಲೇ 8 ಲಕ್ಷ ರೂ. ಅನುದಾನ ಸರಕಾರದಿಂದ ಮಂಜೂರು ಆಗಿದ್ದು, 20 ಲಕ್ಷ ರೂ. ಉದ್ಯೋಗ ಖಾತ್ರಿ ಯೋಜನೆಯಡಿ ಬಳಸಲಾಗುತ್ತಿದೆ. ಉಳಿದಂತೆ ಬೇರೆ ಮೂಲಗಳಿಂದ ಅನುದಾನ ಸಂಗ್ರಹಿಸಲಾಗುವುದು. ಒಟ್ಟೂ 45 ಲಕ್ಷ ರೂ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ತಂಗಚ್ಚನ್, ಸದಸ್ಯ ಸಣ್ಣಿಜಾನ್, ಶಿರಾಡಿ ಗ್ರಾ.ಪಂ.ನಲ್ಲಿ ಈ ಹಿಂದೆ ಪಿಡಿಒ ಆಗಿದ್ದು ಪ್ರಸ್ತುತ ಉಳ್ಳಾಲ ತಾ.ಪಂ.ನಲ್ಲಿ ಸಹಾಯಕ ನಿರ್ದೇಶಕರಾಗಿರುವ ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಸುದರ್ಶನ ಶಿರಾಡಿ, ಶಶಿಧರ ಶಿರಾಡಿ, ಮಂಡಲ ಪಂಚಾಯತ್ ಮಾಜಿ ಸದಸ್ಯ ದಿವಾಕರ ಗೌಡ ಉದನೆ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ತಂಬಿ, ವಿದ್ಯುತ್ ಗುತ್ತಿಗೆದಾರ ಅಭಿಲಾಷ್ ಪಿ.ಕೆ., ಗ್ರಾಮಸ್ಥರಾದ ಎನ್.ಜೆ.ದೇವಸ್ಯ, ಸಣ್ಣಿ ಅಗಸ್ಟಿನ್, ಸಾಬು ಆಚಾರಿ, ಕೆ.ಯು.ಜಾನ್, ಮನೋಜ್ ಜೋಯಿಸ್, ರಾಜೇಶ್ ಕೆ.ಎ., ಜಿನಿ ಜೇಕಬ್, ಸೆಬಾಸ್ಟಿನ್ ಶಿರಾಡಿ, ಜೋಯಿ ಒಡಂಬಳ್ಳಿ, ತೋಮಸ್ ಒಡಂಬಳ್ಳಿ, ಪಿ.ಎಂ.ಜೋನ್, ಜಾನ್ಸನ್ ಪಿ.ಸಿ., ಅಬ್ರಹಾಂ ಪಿ.ಪಿ., ವಿನೋದ್, ಗಣೇಶ್ ಡಿ.ಜೆ., ಸಿಬಿ ಕೆ.ಕೆ., ಸಿಜು ಕೆ.ಕೆ., ಸುರೇಂದ್ರನ್ ಕೆ.ಆರ್., ಕೆ.ವಿಜಯಕುಮಾರ್, ಬಾಬು ಏಲಿಯಾಸ್, ಪಿ.ಎಂ.ಮಾರ್ಕೋಸ್, ವಿಲಿಯಮ್ಸ್ ಶಿರಾಡಿ, ಸಂಜೀವಿನಿ ಒಕ್ಕೂಟದ ಕಲಾಸಣ್ಣಿ, ಆಲಿಸ್‌ಜೋಸ್, ಪ್ರಿಯಾ, ಬಿಂದುರೆಜಿ ಮತ್ತಿತರರು ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಏಲಿಯಾಸ್ ಕೆ.ಸಿ., ಸ್ಮಿತಾ, ವಿಜಯಾ, ತೋಮಸ್ ವಿ.ಎ., ಸುನೀಲ್ ಪಿ.ವಿ., ಗ್ರಂಥಾಲಯ ಮೇಲ್ವಿಚಾರಕಿ ರೆಖಾ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.. ಪಿಡಿಒ ಯಶವಂತ ಬೆಳ್ಚಡ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಶಾರದಾ ವಂದಿಸಿದರು.










