

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕ ಇದರ ನೇತೃತ್ವದಲ್ಲಿ ‘ಹಸಿರೇ ನಮ್ಮ ಉಸಿರು’
ವಿಷಯದ ಕುರಿತು ಕವಿ ಸಮ್ಮಿಲನ ಕಾರ್ಯಕ್ರಮ ಬೆಳ್ತಂಗಡಿಯ ಜೇಸಿ ಭವನ ಜರುಗಿತು.
ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು.
ಕವನಗಳ ಅವಲೋಕನದ ನಿರ್ವಹಣೆಯನ್ನು ಉಪನ್ಯಾಸಕಿ ಹೇಮಾವತಿ ಕೆ. ನಡೆಸಿದರು. ತಾಲೂಕು ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಬದನಾಜೆ, ಕಾರ್ಯದರ್ಶಿ ಸುಭಾಷಿಣಿ, ಸಹ ಕಾರ್ಯದರ್ಶಿ ಸಂತೋಷಿನಿ ಕಾರಂತ್, ಮಹಿಳಾ ಪ್ರಕಾರದ ಕೋಶಾಧಿಕಾರಿ ವನಜಾ ಜೋಷಿ, ಸದಸ್ಯರಾದ ದಿವಾಕರ್ ಕೊಕ್ಕಡ , ಶಿವಪ್ರಸಾದ್ ಸುರ್ಯ, ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.
ಅಭಾಸಪ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿ ಪರಿಸರದ ಕವಿಗಳಾದ ವೃಂದಾ ತಾಮನ್ಕರ್, ಉಷಾ ಶಶಿಧರ್ ಶೆಟ್ಟಿ, ಅಶ್ವಿನಿ ಹೆಬ್ಬಾರ್, ಅಶ್ವಿಜಾ ಶ್ರೀಧರ್, ಅಕ್ಷತಾ ಅಡೂರ್, ಜ್ಯೋತಿ, ಜ್ಯೋತಿ ಬಾಳಿಗ, ಸುಮತಿ ಪಿ. ಕಾರ್ಕಳ, ಧನ್ಯಾ ನಾವುಳೆ, ಆಶಾ, ತೃಷಾ, ಸೃಷ್ಟಿ, ಮೋಕ್ಷಿತ್ ಕೆ., ರಕ್ಷಾ ಎನ್., ಪುಣ್ಯಶ್ರೀ, ತ್ರಿಷಾ ಜೈನ್, ಮೋಕ್ಷಿತಾ, ಮೋಕ್ಷಾ ವರ್ಷಿತಾ, ರಶ್ಮಿ ಸ್ವರಚಿತ ಕವನ ವಾಚಿಸಿದರು.
ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮೇಘನಾ ಪ್ರಶಾಂತ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಅಡೂರ್ ಸಹಕರಿಸಿದರು.










