ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ: ಮಾಜಿ ಗ್ರಾ.ಪಂ ಅಧ್ಯಕ್ಷೆಯ ಮನೆಯ ಅಡುಗೆಕೋಣೆ ಸುಟ್ಟು ಹಾನಿ

ಶೇರ್ ಮಾಡಿ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ದಾಮೋದರ ಆಚಾರ್ಯ ಅವರ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಿಂದ ಅಡುಗೆಮನೆ ಸಂಪೂರ್ಣವಾಗಿ ಸುಟ್ಟು ಹಾನಿಗೀಡಾಗಿದೆ.

ಭಾನುವಾರ ಬೆಳಗ್ಗೆ ಉಪಹಾರ ತಯಾರಿಸಲು ಗ್ಯಾಸ್ ಉರಿಸಿದಾಗ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೆಲವೇ ಕ್ಷಣಗಳಲ್ಲಿ ಅಡುಗೆ ಕೋಣೆಯನ್ನು ಆವರಿಸಿತು. ಘಟನೆ ನಡೆಯುವ ಸಮಯದಲ್ಲಿ ಮನೆಯಲ್ಲಿ ಪೂಜಾ ಕಾರ್ಯಕ್ರಮ ಇದ್ದ ಕಾರಣ ತುಂಬಾ ಜನರಿದ್ದರು. ಸ್ಥಳದಲ್ಲಿದ್ದವರು ಕ್ಷಣಾರ್ಧದಲ್ಲಿ ಆತಂಕಕ್ಕೊಳಗಾದರು.

ಮನೆಯವರು ಬೆಂಕಿ ನಂದಿಸಲು ಶ್ರಮಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣವೇ ಮಾಹಿತಿ ನೀಡಲಾಗಿದ್ದ ಅಗ್ನಿಶಾಮಕ ದಳ ಧರ್ಮಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಮನೆಯ ಅಡುಗೆಕೋಣೆ ಸಂಪೂರ್ಣ ಸುಟ್ಟು ಹೋಗಿದ್ದು ಹಾನಿ ಸಂಭವಿಸಿದೆ.

  •  

Leave a Reply

error: Content is protected !!