

ಶಿಶಿಲ : ಶಿಶಿಲ ಹೋಬಳಿಯ ಕಂಚಿನಡ್ಕ ಎಂಬಲ್ಲಿ ಕಾಡಾನೆ ದಾಳಿ ನಡೆಸಿ, ಸ್ಥಳೀಯ ಕೃಷಿಕ ಸುಬ್ಬ ಗೌಡ ಎಂಬವರ ತೋಟದಲ್ಲಿ ಅಪಾರ ಕೃಷಿ ಹಾನಿ ಮಾಡಿರುವ ಘಟನೆ ಜು.25ರಂದು ನಡೆದಿದೆ.
ತೋಟದಲ್ಲಿ ಬೆಳೆದಿದ್ದ ಬಾಳೆ ಹಾಗೂ ಇತರ ಬೆಳೆಗಳನ್ನು ಕಾಡಾನೆ ಹಾನಿಗೊಳಪಡಿಸಿದ್ದು, ಕೃಷಿಕರಿಗೆ ನಷ್ಟ ಉಂಟಾಗಿದೆ.
ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ., ಗ್ರಾಮಲೆಕ್ಕಾಧಿಕಾರಿ ಶಿವಕುಮಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಆಗಾಗ್ಗೆ ನಡೆಯುತ್ತಿರುವ ಕಾಡಾನೆ ದಾಳಿಯಿಂದ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.










