

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪದಕಗಳನ್ನು ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ.
24ಕೆಜಿ ವರ್ಗದಲ್ಲಿ ಚೆರಿ ಅನ್ವೆಟ್ ರಿಚೆಲ್ ಚಿನ್ನ, 42ಕೆಜಿ ವರ್ಗದಲ್ಲಿ ಶ್ರಾವ್ಯ ಕೆ.ಕೆ ಚಿನ್ನ, 36ಕೆಜಿ ವರ್ಗದಲ್ಲಿ ಝಿಯಾ ಖತೀಜಾ ಚಿನ್ನ, 60 ಕೆಜಿ ವರ್ಗದಲ್ಲಿ ಕೌಶಿಕ್ ಚಿನ್ನ, 40ಕೆಜಿ ವರ್ಗದಲ್ಲಿ ಝೈರಾ ಮಲಿಕ್ ಬೆಳ್ಳಿ, 50ಕೆಜಿ ವರ್ಗದಲ್ಲಿ ಅಫ್ನಾ ಬೆಳ್ಳಿ, 50ಕೆಜಿ ವರ್ಗದಲ್ಲಿ ಅಯಾನ್ ಬೆಳ್ಳಿ ಗಳಿಸಿದ್ದಾರೆ. ಈ ಪೈಕಿ ಚೆರಿ ಅನ್ವೆಟ್, ಶ್ರಾವ್ಯ ಕೆ, ಝಿಯಾ ಖತೀಜಾ ಮತ್ತು ಕೌಶಿಕ್ ಅವರು ಜಿಲ್ಲೆಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಸಂಚಾಲಕ, ಪ್ರಿನ್ಸಿಪಾಲ್ ಫಾ.ವರ್ಗೀಸ್ ಕೈಪನಡ್ಕ, ಕಾರ್ಯದರ್ಶಿ ಫಾ.ಸಾಮ್ಯುವೆಲ್ ಚಾರ್ಜ್, ಉಪಪ್ರಾಂಶುಪಾಲ ಜೋಸ್ ಎಂ.ಜೆ, ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್ ಅಭಿನಂದನೆ ಸಲ್ಲಿಸಿದ್ದಾರೆ.











