

ಕಡಬ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪುತ್ತೂರು ಇವರ ಆಶ್ರಯದಲ್ಲಿ ಶನಿವಾರ ದಂದು ಕಡಬದ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರೆಂಜಿಲಾಡಿಯ ಸಾಂತೋಮ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಗೆ ಬಹುಮಾನ.
ಪ್ರೌಢಶಾಲಾ 55 ಕೆಜಿ ವಿಭಾಗದಲ್ಲಿ 9ನೇ ತರಗತಿಯ ಸಾತ್ವಿಕ್ ದ್ವಿತೀಯ ಸ್ಥಾನ ಗಳಿಸಿದ್ದು, ಹಿರಿಯ ಪ್ರಾಥಮಿಕ 50 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಕುಮಾರಿ ಚಾಂದಿನಿ ಶೆಣೈ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ರೋಹಿತ್ ಎಸ್. ಎನ್. ತರಬೇತಿ ನೀಡಿದ್ದು, ಸಂಸ್ಥೆಯ ಪರವಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸಲಾಯಿತು.











