


ನೆಲ್ಯಾಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡ ಜೇಸಿಐ ಭಾರತದ ವಲಯ 15ರ ವಾರ್ಷಿಕ ವಲಯ ಸಮ್ಮೇಳನ “ಕಹಳೆ” ಜೇಸಿಐ ಮಂಗಳೂರು ಸಾಮ್ರಾಟ್ ಘಟಕದ ಆತಿಥ್ಯದಲ್ಲಿ ಅ.18 ಮತ್ತು 19 ರಂದು ಸ್ವಸ್ತಿಕ ವಾಟರ್ ಫ್ರಂಟ್, ಸುಲ್ತಾನ್ ಬತ್ತೇರಿ, ಮಂಗಳೂರಿನಲ್ಲಿ ನಡೆಯಿತು.
ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ .ಬಿ.ಎ ಮತ್ತು ವಲಯದ ಪ್ರಥಮ ಲೇಡಿ ಜೇಸಿ ಶೀಲಾ ಅಭಿಲಾಷ್ ವಲಯದ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಒಂಭತ್ತು ಸಂಚಿಕೆಗಳನ್ನು ಬಿಡುಗಡೆ ಮಾಡಿರುವ ಗುರುತರ ಕಾರ್ಯವನ್ನು ಗುರುತಿಸಿ, ಜೇಸಿ ಮೋಹನ್ ಚಂದ್ರ ತೋಟದ ಮನೆ ಅವರಿಗೆ “ಅತ್ಯುತ್ತಮ ವಲಯ ಸಂಯೋಜಕ ವಿನ್ನರ್” (Outstanding Zone Coordinator Winner) ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ವಲಯ 15ರ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವಾಧ್ಯಕ್ಷರಾಗಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿ ಎನ್ಎಂಪಿಯು ಕಾಲೇಜು ಅರಂತೋಡು,ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.






