ಕೆ-ಸೆಟ್ ಪರೀಕ್ಷೆ | ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ

ಶೇರ್ ಮಾಡಿ

ಕೆ-ಸೆಟ್ ಪರೀಕ್ಷೆ (KSET Exam) ಹಿನ್ನೆಲೆ ಬಳ್ಳಾರಿಯಲ್ಲಿ ಇಂದು ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ, ಕೈಕಡಗ ಸೇರಿದಂತೆ ಮೈಮೇಲೆ ಹಾಕಿಕೊಂಡಿರೋ ದೇವರ ದಾರವನ್ನು ಸಹ ಬಿಚ್ಚಿಸಿ ಅಭ್ಯರ್ಥಿಗಳನ್ನು ಒಳಗೆ ಕಳುಹಿಸಿದ ಘಟನೆ ನಡೆದಿದೆ.

ಕಿವಿಯೋಲೆ, ಮೂಗುತಿ ಹಾಗೂ ದೇವರ ದಾರ ಬಿಚ್ಚಿಸಿದ್ದಕ್ಕೆ ಕೆಲ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಅಸಮಾಧಾನದ ನಡುವೆಯೂ ಅನಿವಾರ್ಯವಾಗಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರು. ಇನ್ನೂ ಪರೀಕ್ಷೆ ಮುಗಿಸಿಕೊಂಡು ಹೊರಬಂದ ಬಳಿಕ ಪ್ರತಿಕ್ರಿಯೆ ನೀಡಿದ ಪರೀಕ್ಷಾರ್ಥಿಗಳು ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಸಮಾಧಾನ ಹೊರಹಾಕಿದರು.

ಕಿವಿಯೋಲೆ, ಮೂಗುತಿ ಬಿಚ್ಚಿಸಿದ್ದು ನಮ್ಮ ಮನಸ್ಸಿಗೆ ಬೇಜಾರಾಗಿದೆ. ನಮಗೆ ಮಾಂಗಲ್ಯ, ಕಾಲುಂಗುರ ಹೇಗೋ, ಹಾಗೇ ಮೂಗುತಿಯೂ ಬಹಳ ಮುಖ್ಯ. ಆದ್ರೂ ನಿಯಮ ಪಾಲನೆ ಮಾಡಬೇಕು ಅನ್ನೋ ಕಾರಣಕ್ಕೆ ಅನಿವಾರ್ಯವಾಗಿ ಬಿಚ್ಚಿಟ್ಟು ಹೋಗಿದ್ದೇವೆ ಎಂದರು ಪರೀಕ್ಷಾರ್ಥಿಗಳು.

  •  

Leave a Reply

error: Content is protected !!