

ನೆಲ್ಯಾಡಿ: ನೆಲ್ಯಾಡಿ–ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.19ರಂದು ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೂರ್ಯನಗರದ ಶ್ರೀರಾಮ ವಿದ್ಯಾಲಯದ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಅದ್ಭುತ ಪ್ರತಿಭೆ ಮತ್ತು ಕೌಶಲ್ಯವನ್ನು ತೋರಿಸಿ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಗಳಿಸಿದ್ದಾರೆ.
ಕನ್ನಡ ಮಾಧ್ಯಮ ಹಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ವೈದೇಹಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ಪ್ರಾಪ್ತಿ ಪ್ರಥಮ, ಭಕ್ತಿಗೀತೆಯಲ್ಲಿ ಖುಷಿ.ಎನ್ ಪ್ರಥಮ.
ಆಂಗ್ಲಮಾಧ್ಯಮ ಹಿರಿಯರ ವಿಭಾಗದಲ್ಲಿ ಮಿಮಿಕ್ರಿಯಲ್ಲಿ ಯಶ್ವಿತ್ ಪ್ರಥಮ, ಚಿತ್ರಕಲೆಯಲ್ಲಿ ಆಧ್ಯಾ ಕೆ.ವಿ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಶ್ರೀವಲ್ಲಭ ತೃತೀಯ.
ಕನ್ನಡ ಮಾಧ್ಯಮ ಕಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತ್ರಿಶಾ ದ್ವಿತೀಯ, ಛದ್ಮವೇಷದಲ್ಲಿ ವರ್ಷಿತ್ ಕೆ.ದ್ವಿತೀಯ, ಚಿತ್ರಕಲೆಯಲ್ಲಿ ನಿದೀಕ್ಷಾ ತೃತೀಯ, ಕ್ಲೇ ಮಾಡಲಿಂಗ್ ನಲ್ಲಿ ಯಶ್ವಿನ್ ಕೆ. ತೃತೀಯ.
ಆಂಗ್ಲ ಮಾಧ್ಯಮ ಕಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ವೃದ್ದಿ ತೃತೀಯ.
ವಿದ್ಯಾರ್ಥಿಗಳ ಈ ಯಶಸ್ಸಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಮುರಳಿಧರ, ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಕನ್ನಡ ಮಾಧ್ಯಮ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ, ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕಿ ಕಾವ್ಯ ಹಾಗೂ ಶಿಕ್ಷಕರ ವೃಂದ ಅಭಿನಂದಿಸಿದರು.






