

ನೆಲ್ಯಾಡಿ: ಸುಳ್ಯ ತಾಲೂಕಿನ ಅಮರಶ್ರೀ ಭಾಗ್‌ನಲ್ಲಿ ಇರುವ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನ.22 ಮತ್ತು 23 ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ.
ಚಿರಾಗ್ ಕುಮಿಟೆ ಪ್ರಥಮ, ಕಟ ದ್ವಿತೀಯ, ನಿಶಿತ್ ಕಟ ಪ್ರಥಮ, ಕುಮಿಟೆ ತೃತೀಯ, ನವೀಶ್ ಕಟ ದ್ವಿತೀಯ, ಕುಮಿಟೆ ದ್ವಿತೀಯ, ಹೇಮಂತ್ ಕಟ ದ್ವಿತೀಯ, ಕುಮಿಟೆ ದ್ವಿತೀಯ, ಪೂಜನ್ ಕುಮಿಟೆ ದ್ವಿತೀಯ, ಕಟ ತೃತೀಯ, ಕೃತಿ ಕುಮಿಟೆ ದ್ವಿತೀಯ, ಕಟ ಚತುರ್ಥ, ಹರ್ಷ ಕಟ ದ್ವಿತೀಯ, ಕುಮಿಟೆ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ರಾಷ್ಟ್ರೀಯ ಮಟ್ಟದ ಸಾಧನೆಗೆ ವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.






