

ನೆಲ್ಯಾಡಿ: ದೋಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದಿಂದ ಪೊಳಲಿ ಮತ್ತು ಕಟೀಲ್ ದೇವಸ್ಥಾನದ ಕಡೆಗೆ 5ನೇ ವರ್ಷದ 2 ದಿನಗಳ ಭಕ್ತಿಪೂರ್ಣ ಪಾದಯಾತ್ರೆ ನಡೆಯಿತು.
ಪಾದಯಾತ್ರೆಗೆ ಮುನ್ನ ದೊಂತಿಲ ದೇವಸ್ಥಾನದಲ್ಲಿ ಅರ್ಚಕ ಅನಂತ ಪದ್ಮನಾಭ ಭಟ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರು ದೋಂತಿಲ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ನಾರಾಯಣ ಆಚಾರಿ ಮತ್ತು ಗುರುಪ್ರಸಾದ್ ಸುಬ್ರಮಣ್ಯ ವಿಲಾಸ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಅಧಿಕೃತವಾಗಿ ಚಾಲನೆ ನೀಡಲಾಯಿತು.
ಪಾದಯಾತ್ರೆಯಲ್ಲಿ ಸಂತೋಷ್ ಭಂಡಾರಿ, ನವೀನ ದೊಂತಿಲ, ರವಿಪ್ರಸಾದ್ ಗುರೂಜಿ, ಬಾಲಕೃಷ್ಣ ದೋಂತಿಲ, ಮೋಹನ್ ದೋಂತಿಲ, ಚರಣ್ ಕೊಕ್ಕಡ, ನಾಗೇಶ್ ಕೊಕ್ಕಡ, ಕರುಣಾಕರ ಕೊಕ್ಕಡ, ನಾಗೇಶ್ ನೆಲ್ಯಾಡಿ, ಆನಂದ ಜಯಮಂಗಳ, ರಂಜಿತ್ ಜಯಮಂಗಳ, ವಿಜೇಶ್ ಕೊಲ್ಯೊಟ್ಟು, ಅನಿಲ್ ಇಚ್ಲಂಪಾಡಿ, ಜಯರಾಜ್, ಕೃಷ್ಣ, ಪೊಡಿಯ ಉಳಿತೊಟ್ಟು, ಪೊಡಿಯ ಪಟ್ಟೆ, ಬಾಬು, ಯಕ್ಷಿತ್, ಅಶೋಕ್ ಆಚಾರಿ ಜಾಲ್ಮನೆ, ಸುಧೀಶ್ ದೋಂತಿಲ ಸೇರಿದಂತೆ ಸುಮಾರು 25 ಮಂದಿ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.






