

ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಸಂತ ತೋಮಸ್ ಓರ್ಥೋಡೋಕ್ಸ್ ಸಿರಿಯನ್ ಚರ್ಚ್‌ನ ಪುನರ್‌ನಿರ್ಮಿತ ನೂತನ ದೇವಾಲಯದ ಎರಡು ದಿನಗಳ ಪವಿತ್ರೀಕರಣ ಕಾರ್ಯಕ್ರಮ ಬುಧವಾರ ಭವ್ಯವಾಗಿ ಆರಂಭಗೊಂಡಿದ್ದು, ಸಾವಿರಾರು ಭಕ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.

ಬುಧವಾರ ಮಧ್ಯಾಹ್ನ 3 ಗಂಟೆಗೆ ಕಡಬ ಪೇಟೆಯಿಂದ ನಾಗರಿಕ ಸನ್ಮಾನದೊಂದಿಗೆ ಪರಮಪೂಜ್ಯ ಕಾಥೋಲಿಕೋಸ್ ಹಾಗೂ ಇತರ ಧರ್ಮಾಧ್ಯಕ್ಷರನ್ನು ವಿವಿಧ ಚರ್ಚ್‌ಗಳ ಧರ್ಮಗುರುಗಳು ಮತ್ತು ಸಂಘಟನೆಗಳ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ಚರ್ಚ್ ಆವರಣದವರೆಗೆ ಕರೆತರಲಾಯಿತು.
ಸಂಜೆ 5.30ಕ್ಕೆ ಹೊಸದಾಗಿ ನಿರ್ಮಿಸಿದ ಧ್ವಜಸ್ಥಂಭದ ಶುದ್ಧೀಕರಣ ಮತ್ತು ದ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಬಳಿಕ ಸಂಜೆ ಪ್ರಾರ್ಥನೆ, ದೇವಾಲಯ ಪವಿತ್ರೀಕರಣದ ಮೊದಲ ಹಂತ, ಶುಶ್ರೂಷೆ ಭಾಗ–1, ಸ್ನೇಹಭೋಜನ ಮತ್ತು ವರ್ಣರಂಜಿತ ಆಕಾಶ ದೃಶ್ಯಗಳು, ಶೃಂಗಾರಿ ಮೇಳ ನಡೆಯಿತು.
ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರು ಫಾ.ಪೌಲ್ ಜೇಕಬ್, ಕಾರ್ಯದರ್ಶಿ ಜೆಬಿನ್ ಜೆ.ಪಿ, ಕೋಶಾಧಿಕಾರಿ ವಿನೋದ್ ಟಿ.ಟಿ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಸಮಿತಿ ಪದಾಧಿಕಾರಿಗಳು, ಚರ್ಚ್ ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಗುರುವಾರದಂದು ಬೆಳಗ್ಗೆ 5.30 ಕ್ಕೆ ರಾತ್ರಿ ಪ್ರಾರ್ಥನೆ, 6ಕ್ಕೆ ಪ್ರಭಾತ ಪ್ರಾರ್ಥನೆ, 7ಕ್ಕೆ ದೇವಾಲಯ ಪವಿತ್ರೀಕರಣ ಭಾಗ ಎರಡು ಮತ್ತು ಮೂರು ನಡೆಯಲಿದೆ. 8.30ಕ್ಕೆ ಪವಿತ್ರ ತ್ರೈ ಬಲಿಪೂಜೆ, 10.30ಕ್ಕೆ ಆಶೀರ್ವಾದ, ಶಿಲುಬೆ ಆಶೀರ್ವಾದ, ಬೆಳಗಿನ ಉಪಹಾರ, ಸಾರ್ವತ್ರಿಕ ಸಮ್ಮೇಳನ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್. ಮಲಂಕರ ಕಥೋಲಿಕ್ ಸಭೆ ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಗೀವರ್ಗಿಸ್ ಮಾರ್ ಮಕಾರಿಯೋಸ್, ಬ್ರಹ್ಮಾವರ ಧರ್ಮಪ್ರಾಂತ್ಯ ಕಾರ್ಯದರ್ಶಿ ಫಾ.ಕುರಿಯಾಕೋಸ್ ಪಿ. ತೋಮಸ್, ಸುಳ್ಯ ವಿಧಾನಸಭಾ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಐವನ್ ಡಿಸೋಜ, ಕಡಬ ತಹಶಿಲ್ದಾರ ಪ್ರಭಾಕರ ಕಜೂರೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನೂಜಿಬಾಳ್ತಿಲ ಅಧ್ಯಕ್ಷರು ಚಂದ್ರಾವತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ.ವರ್ಗಿಸ್, ಮಂಗಳೂರು ಉದ್ಯಮಿಗಳು ಎ.ಸಿ. ಕುರಿಯನ್, ರೆಂಜಿಲಾಡಿ ಬೇಡು ಯಶೋಧರ ಯಾನೆ ತಮ್ಮಯ ಬಲ್ಲಾಳ,ಕಲ್ಲುಗುಡ್ಡೆ ಕೃಷ್ಣ ಎಲೆಕ್ಟಿಕಲ್ಸ್ ಮಾಲಕರು ಅಭಿಲಾಷ್ ಪಿ.ಕೆ. ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.






