

ನೆಲ್ಯಾಡಿ: ಉಪ್ಪಿನಂಗಡಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ವಳಾಲಿನ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿತು. ಈ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಅದ್ಭುತ ಪ್ರದರ್ಶನದಿಂದ ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ್ದಾರೆ.
ಜನಪದ ನೃತ್ಯದಲ್ಲಿ ಐಶ್ವರ್ಯ ಮತ್ತು ಬಳಗ ಪ್ರಥಮ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಶಮ್ಯ ಪ್ರಥಮ. ಚಿತ್ರಕಲಾ ವಿಭಾಗದಲ್ಲಿ ಶ್ರೀಕಾಂತ್ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ವರ್ಷಾ ಎ ದ್ವಿತೀಯ. ಭಾವಗೀತೆಯಲ್ಲಿ ಧೃತಿ ಎಸ್.ಎಂ.ದ್ವಿತೀಯ ಹಾಗೂ ಧನುಷ್ ತೃತೀಯ. ಅರೇಬಿಕ್ ಪಠಣ ವಿಭಾಗದಲ್ಲಿ ಶಫ ಫಾತಿಮಾ ತೃತೀಯ. ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಜೆಸ್ಲಿನ್ ಅನ್ನಾ ಜೋಸೆಫ್ ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರಾದ ಕರುಣಾಕರ, ಭವ್ಯ, ರಾಬಿಯಾ, ಸಿಮಿ ಹಾಗೂ ಅನುಷಾ ಮಾರ್ಗದರ್ಶನ ನೀಡಿದ್ದರು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್, ಸಂಚಾಲಕ ಫಾ.ನೋಮಿಸ್ ಕುರಿಯಕೋಸ್, ಪ್ರಾಚಾರ್ಯ ಎಂ.ಕೆ. ಏಲಿಯಾಸ್, ಮುಖ್ಯಶಿಕ್ಷಕ ತೋಮಸ್ ಎಂ.ಐ., ಹರಿಪ್ರಸಾದ್ ಕೆ, ಹಾಗೂ ಶಾಲೆಯ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.






