ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಅಯ್ಯಪ್ಪ ಮಂಡಲೋತ್ಸವವು 27-12-2025 ನೇ ಶನಿವಾರದಂದು ಭಕ್ತಿ ಸಡಗರಗಳಿಂದ ಜರಗಲಿದೆ.
ಹೊಸಮನೆ ಮಾಯಿಲಪ್ಪ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ,ಸಚಿನ್ ಗುರುಸ್ವಾಮಿ ಅವರ ನೇತೃತ್ವದಲ್ಲಿ ಅಯ್ಯಪ್ಪ ಭಕ್ತ ವೃಂದ ಹಾಗೂ ಊರವರ ಸಹಕಾರದಲ್ಲಿ ನಡೆಯುವ ಈ ಮಹೋತ್ಸವಕ್ಕೆ ಗ್ರಾಮದಲ್ಲಿ ವಿಶೇಷ ಸಾಂಸ್ಕೃತಿಕ–ಧಾರ್ಮಿಕ ವಾತಾವರಣ ಸೃಷ್ಟಿಯಾಗಲಿದೆ.
ಮಂಡಲೋತ್ಸವದ ಅಂಗವಾಗಿ ಭಕ್ತಿ ಗಾನ ಸುಧೆ, ಕುಣಿತ ಭಜನೆ, ಸಾಧಕರಿಗೆ ಸನ್ಮಾನ, ಮಹಾಪೂಜೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಿಗಾಗಿ ಆಯೋಜಿಸಲಾಗಿದೆ. ದೇವಸ್ಥಾನದಲ್ಲಿ ಅನ್ನಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಾರ್ಯಕ್ರಮಗಳ ವಿವರ
ಸಂಜೆ ಗಂಟೆ 7.00 ರಿಂದ – 8.30 ಭಕ್ತಿ ಗಾನ ಸುಧೆ
ಸಂಜೆ 7.30 ಕ್ಕೆ
ಶ್ರೀ ಗಂಗಾಧರೇಶ್ವರ ದೇವರ ಪೂಜೆ
ಸಂಜೆ 8.30 ರಿಂದ 9.30 ವಿವಿಧ ಭಜನಾ ತಂಡಗಳಿಂದ ಏಕ ಕಾಲದಲ್ಲಿ ಕುಣಿತ ಭಜನೆ ಹಾಗೂ ಸಾಧಕರಿಗೆ ಸನ್ಮಾನ
ರಾತ್ರಿ ಗಂಟೆ 10.00 ಕ್ಕೆ
ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಹಾಗೂ ಅನ್ನಸಂತರ್ಪಣೆ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಧಾರ್ಮಿಕ ಸೇವೆಯಲ್ಲಿ ನೆರವಾಗುವಂತೆ ಇಚ್ಲಂಪಾಡಿ ಶ್ರೀ ಅಯ್ಯಪ್ಪ ಭಕ್ತವೃಂದ ಹಾರ್ದಿಕ ಆಹ್ವಾನವನ್ನು ನೀಡಿದೆ.