

ಸುಬ್ರಹ್ಮಣ್ಯ : ನಾಗರಾಧನೆಯ ಪುಣ್ಯಕ್ಷೇತ್ರ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡಿ ಪ್ರಪಂಚದಲ್ಲಿ ನಾಗರಾಧನೆಗೆ ಹೆಸರುವಾಸಿಯಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ದಿನ ನಿತ್ಯ ಸಾವಿರಾರು ಭಕ್ತರು ಶ್ರೀ ದೇವರ ದರ್ಶನ ಹಾಗೂ ಸೇವೆಗಾಗಿ ಬರುತ್ತಿದ್ದಾರೆ. ಆದರೆ ಎಲ್ಲೆಡೆ ಹೆದ್ದಾರಿ ಬದಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಎಸೆದು ಹೋಗುತ್ತಿರುವುದು ಕಳೆದ ಹಲವಾರು ವರ್ಷಗಳಿಂದ ಕಂಡುಬಂದಿದೆ.
ಪ್ರತಿ ಬಾರಿಯೂ ವಾರದಲ್ಲಿ ಒಂದು ದಿನ ಸ್ಥಳೀಯ ಡಾ.ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನವರು ಕುಮಾರಧಾರ ಸ್ಥಾನಗಟ್ಟ ಹಾಗೂ ಸೇತುವೆ ಭಾಗ ಮತ್ತು ಕುಲಕುಂದವರೆಗಿನ ರಸ್ತೆದ ಅಕ್ಕಪಕ್ಕದಲ್ಲಿ ಇರುವ ಕಸಗಡ್ಡಿಗಳು, ಪ್ಲಾಸ್ಟಿಕ್ ಚೀಲ, ಇನ್ನಿತರ ಕೊಚ್ಚ ವಸ್ತುಗಳನ್ನ ಶೇಖರಿಸಿ ಸ್ವಚ್ಛಗೊಳಿಸುವ ಕೆಲಸ ವನ್ನು ಕೈಗೊಂಡಿರುತ್ತಾರೆ. ಈ ಬಾರಿ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಗಳ ಗುಂಪು ರಚಿಸಿ ಒಂದೊಂದು ಗುಂಪಿಗೆ ಒಂದೊಂದು ಜವಾಬ್ದಾರಿ ನೀಡಿರುತ್ತಾರೆ. ಮೊದಲನೇ ತಂಡದಲ್ಲಿ ಸುಮಾರು 10 -20 ಜನ ಇದ್ದು ಪೂರ್ತಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವರು. ಸ್ವತಹ ಡಾ.ರವಿ ಕಕ್ಕೆಪದವು ಅವರೇ ನಿಂತು ಅವರ ಸ್ವಯಂಸೇವಕರಿಂದ ಈ ಸ್ವಚ್ಛದ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಸ್ವಚ್ಛತಾ ಸಂದೇಶ:
ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಹಾಗು ಇನ್ನಿತರ ವಸ್ತುಗಳನ್ನು ತರಬಾರದು. ಹಾಗೊಂದು ವೇಳೆ ತಂದಲ್ಲಿ ಅದನ್ನ ಪಕ್ಕದಲ್ಲಿರುವ ಡಸ್ಟ್ ಬಿನ್ನಿಗೆ ಹಾಕಿ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವಾಗಿರುವುದರಿಂದ ಎಲ್ಲಾ ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.






