


ನೆಲ್ಯಾಡಿ: ಕಡಬ ತಾಲೂಕಿನ ವೈದ್ಯಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆ, ಮೊದಲ ಬಾರಿಗೆ ಸಂಪೂರ್ಣ ಮೊಣಗಂಟು ಬದಲಾವಣೆ (ಟೋಟಲ್ ನೀ ರಿಪ್ಲೇಸ್ಮೆಂಟ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಗೋಳಿತೊಟ್ಟಿನ ಮಹಿಳೆಯೊಬ್ಬರು ಕಳೆದ 12 ವರ್ಷಗಳಿಂದ ತೀವ್ರ ಮೊಣಗಂಟು ನೋವಿನಿಂದ ಬಳಲುತ್ತಿದ್ದು, ನಡೆಯಲು ಸಹ ತೊಂದರೆ ಅನುಭವಿಸುತ್ತಿದ್ದರು. ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಿಂದ ಇದೀಗ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಶಸ್ತ್ರಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆ ಅಶ್ವಿನಿ ಆಸ್ಪತ್ರೆಯು ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಡಾ. ಶರತ್ ಬಾಲೆಮನೆ, ಡಾ. ಶಮಂತ್ ವೈ.ಕೆ., ಡಾ. ನಿಶಾಂತ್ ಹಾಗೂ ಡಾ. ಮಹಿನ್ ಅವರನ್ನೊಳಗೊಂಡ ಪರಿಣತ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಅನಸ್ಥೀಷಿಯಾ ವಿಭಾಗದಲ್ಲಿ ಡಾ. ಅನಿಶ್, ದಾದಿಯರಾದ ಲೀಲಾವತಿ ಮತ್ತು ಬಿನ್ಸಿ ಸಹಕರಿಸಿದರು.
ಶಸ್ತ್ರಚಿಕಿತ್ಸೆ ಯಾವುದೇ ಅಡಚಣೆ ಇಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗಿ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೇ ಉನ್ನತ ಮಟ್ಟದ ಅಸ್ಥಿ ಚಿಕಿತ್ಸೆಗೆ ದಾರಿ ತೆರೆದಂತಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುರಳಿಧರ ವೈ.ಕೆ., ತಿಳಿಸಿದ್ದಾರೆ.






